ರೈಲು ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನ : ತಾಯಿ, ಮಕ್ಕಳ ರಕ್ಷಣೆ

ಆಕೆ ನಿಜವಾಗಿಯೂ ಮಾನಸಿಕ ಅಸ್ವಸ್ಥಳೋ ಅಥವಾ ಜೀವನದಲ್ಲಿ ಜುಗುಪ್ಸೆಗೊಂಡು ಖಿನ್ನತೆಗೊಳಗಾಗಿದ್ದಾಳೂೀ ಗೊತ್ತಿಲ್ಲ. ಆದರೆ, ತಾಯಿಯ ಈ ಮನಸ್ಥಿತಿಗೆ ಆ ಕಂದಮ್ಮಳಿಬ್ಬರು ಕ್ಷಣಾರ್ಧದಲ್ಲಿ ದಾರುಣ ಸಾವು ಕಾಣುತ್ತಿದ್ದರು. ಆದರೆ, ಅಲ್ಲಿದ್ದವರ ಸಮಯ ಪ್ರಜ್ಞೆಯಿಂದ ಮೂರು ಜೀವಗಳು ಬದುಕಿವೆ. 

ಈ ಆ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಆಶ್ರಯದಲ್ಲಿದ್ದಾರೆ.  ಕೊಪ್ಪಳ ರೇಲ್ವೆ ನಿಲ್ದಾಣದಲ್ಲಿ ಇಂದು ಒಂದು ಅನಾಹುತ ನಡೆಯುವುದು ತಪ್ಪಿದೆ. ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುವ ಶಾರದ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳಾದ ಮಧುಸೂದನ ಮತ್ತು ಸಾಯಿಕುಮಾರನನ್ನು ಕೊಪ್ಪಳ ರೇಲ್ವೆ ನಿಲ್ದಾಣದಲ್ಲಿ ರೇಲ್ವೆ ಹಳಿಗೆ ಬೀಳಿಸಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ, ಅಲ್ಲಿದ್ದವರ ಸಮಯ ಪ್ರಜ್ಞೆಯಿಂದ ಈ ಮೂವರನ್ನು ರಕ್ಷಿಸಿದರು. ರೇಲ್ವೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ರಕ್ಷಣೆ ಮಾಡಿ ಬಳಿಕ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ. ಈಗ ಆ ಮಕ್ಕಳಿಗೆ ಬಾಲಕರ ಬಾಲ ಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇನ್ನು ಮೂಲತಃ ಗದಗ ನಿವಾಸಿ ಎಂದು ಹೇಳಲಾಗುತ್ತಿರುವ ಶಾರದಾ ತನ್ನ ಇಬ್ಬರು ಮಕ್ಕಳನ್ನು ನಿನ್ನೆ ಗದಗ್‍ಗೆ ಕರೆದುಕೊಂಡು ಹೋಗಿ ಸಿನೆಮಾ ನೋಡಿದ್ದಾಳೆ. ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಕೊಪ್ಪಳಕ್ಕೆ ಬಂದಿದ್ದಾಳೆ ಎಂದು ಶಾರದಾಳ ಮಗ ಹೇಳಿದ್ದಾನೆ. ಇನ್ನು ಶಾರದಾಳನ್ನು ಮಹಿಳಾ ಸಾಂತ್ವನ ಕೇಂದ್ರದ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ ಕೌನ್ಸಿಲಿಂಗ್ ಮಾಡಿದ್ದಾರೆ. ಆದರೆ, ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಮಾಹಿತಿ ನೀಡುತ್ತಿದ್ದಾಳೆ. ಒಂದೊಮ್ಮೆ ಸಮಾಜವನ್ನು ದೂಷಿಸುತ್ತಾಳೆ, ಮತ್ತೊಮ್ಮೆ ತನ್ನ ಗಂಡನನ್ನು ಶಪಿಸುತ್ತಾಳೆ. ಹೀಗಾಗಿ, ಈಕೆಯ ಸಂಬಂಧಿಕರ ಬಗ್ಗೆ ಮಾಹಿತಿ ನೀಡಿದ್ದು ಅವರನ್ನು ದೂರವಾಣಿ ಮೂಲಕ ವಿಷಯ ತಿಳಿಸಲಾಗಿದೆ ಎಂದು ಬಾಲಕರ ಸರ್ಕಾರಿ ಬಾಲ ಮಂದಿರದ ಅಧೀಕ್ಷಕಿ ಹೇಳಿದ್ದಾರೆ. ರೋಹಿಣಿ ಕೋಟಗಾರ, ಬಾಲಮಂದಿರದ ಅಧೀಕ್ಷಕಿ,
ಈಗ ತಾಯಿ ಶಾರದಾ ಮತ್ತು ಆ ಇಬ್ಬರು ಮಕ್ಕಳು ಬಾಲಮಂದಿರದ ಆಶ್ರಯ ಪಡೆದಿದ್ದಾರೆ. ಇನ್ನು ಸಂಬಂಧಿಕರು ಬಂದ ಮೇಲೆ ಅವರನ್ನು ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಟ್ನಲ್ಲಿ ಬದುಕಿನಲ್ಲಿ ನಡೆಯುವ ಒಂದಿಷ್ಟು ಘಟನೆಗಳು ಮನುಷ್ಯನನ್ನು ಇಂತಹ ಸ್ಥಿತಿಗೆ ತಲುಪುವಂತೆ ಮಾಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.