ಭಾಗ್ಯನಗರ : ಅವಾಚ್ಯ ಶಬ್ದ ಬಳಸಬೇಡಿ ಎಂದಿದ್ದಕ್ಕೆ ಪಟ್ಟಣ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ‌

Koppal News  ಅವಾಚ್ಯ ಶಬ್ದ ಬಳಸಬೇಡಿ ಎಂದಿದ್ದಕ್ಕೆ ಪಟ್ಟಣ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ‌ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಭಾಗ್ಯನಗರದಲ್ಲಿ ಘಟನೆ ನಡೆದಿದ್ದು  ಪಟ್ಟಣ ಪಂಚಾಯತ್ ಸದಸ್ಯ ಸುರೇಶ್ ಮೇಲೆ ಯುವಕರ ಗ್ಯಾಂಗ್..ಹಲ್ಲೆ ಮಾಡಿದೆ. ಅಂಬೇಡ್ಕರ್ ಸರ್ಕಲ್ ಬಳಿ  ಪಾನಿಪುರಿ ತಿನ್ನುವಾಗ ಅವಾಚ್ಯ ಶಬ್ದ ಬಳಸಿ ಹರಟೆ ಹೊಡೆಯುತ್ತಿದ್ದ ಯುವಕರಿಗೆ  ಸುರೇಶ ಬುದ್ದಿ ಮಾತು ಹೇಳಿ ಜನ ಬರ್ತಾರೆ ಇಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಬೇಡಿ  ಮಹಿಳೆಯರೂ ಬರುತ್ತಿರುತ್ತಾರೆ ಎಂದಿದ್ದಕ್ಕೆ ಹಲ್ಲೆ ಮಾಡಿದ್ಧಾರೆ. ಹಲ್ಲೆ ಮಾಡಿದ  ಯುವಕರನ್ನು ಥಳಿಸಿ ಕೂಡಿ ಹಾಕಿದ್ಧಾರೆ. 

ಹಲ್ಲೆ ಮಾಡಿದ ಇಬ್ಬರನ್ನು ಕೂಡಿ ಹಾಕುತ್ತಿದ್ದಂತೆ ಮೂವರು ಎಸ್ಕೇಪ್ ಆಗಿದ್ಧಾರೆ.ಸ್ಥಳಿಯರು  ಆ ಯುವಕರನ್ನು  ವ್ಯಾಯಾಮ ಶಾಲೆಯಲ್ಲಿ ಕೂಡಿ ಹಾಕಿದ್ಧಾರೆ. ಕೂಡಿ ಹಾಕಿದ ಇಬ್ಬರನ್ನ ವಶಕ್ಕೆ ತಗೆದುಕೊಂಡ ಪೊಲೀಸರು

ಜನರನ್ನ ಚದುರಿಸಲು ಪೊಲೀಸರ ಲಘು ಲಾಠಿ ಪ್ರಹಾರ ಮಾಡಿದ್ಧಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು  ಹಲ್ಲೆ ಮಾಡಿದವರನ್ನು ಕೊಪ್ಪಳ ನಗರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

Please follow and like us:
error