ಬಿಜೆಪಿ ಮುಖಂಡನ ಕಾಮಕಾಂಡದ ಪೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್.

ಕೊಪ್ಪಳ : ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡನ ಕಾಮಕಾಂಡದ ಪೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಕನಕಗಿರಿಯ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಗೌಡ ಹೊಸಮನಿಯ ಕಾಮಕಾಂಡದ ಪೋಟೋಗಳು ವೈರಲ್ ಆಗಿವೆ. ಈ ಹಿಂದೆ ಮಹಿಳೆಯೊಂದಿಗಿನ ಕಾಮದ ಪೋಟೊಗಳು ಜಿಲ್ಲೆಯ ತುಂಬೆಲ್ಲಾ ಸುದ್ದಿ ಮಾಡಿದ್ದವು. ಈಗ ಅವೇ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. 
ವಿವಿಧ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಮತ್ತು ಸದ್ಯ ಬಿಜೆಪಿಯ ಕಾರ್ಯಕರ್ತನಾಗಿರುವ ಮಲ್ಲಿಕಾರ್ಜುನಗೌಡ ಹೊಸಮನಿಯ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹರಿಬಿಡಲಾಗಿದೆ.  ಚುನಾವಣೆಯ ಸಂದರ್ಭದಲ್ಲಿ ಮತ್ತೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ ಈ ಪೋಟೊಗಳು. ಚುನಾವಣೆಯ ಸಂದರ್ಭದಲ್ಲಿ  ಬಿಜೆಪಿ ಪಕ್ಷಕ್ಕೆ  ತೀವ್ರ ಮುಜುಗರ ಉಂಟಾಗುವಂತಾಗಿದೆ.  ಹನುಮಂತ ನಾಯಕ ಎನ್ನುವ ಸಾಮಾಜಿಕ ಕಾರ್ಯಕರ್ತ ತನ್ನ ವಾಲ್ ನಲ್ಲಿ ಈ ಪೋಟೋಗಳನ್ನು ಹಾಕಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು  ಇತರ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.