ಬಯಲಾಯಿತು ಶಾಸಕ ಪರಣ್ಣ ಮುನವಳ್ಳಿ ಅಸಲಿಮುಖ ?

ಈ ಆಡಿಯೋ ದ ಬಗ್ಗೆ ಹಲವಾರು ದಿನಗಳಿಂದ ಗುಸು ಗುಸು ಕೇಳಿ ಬರುತ್ತಿತ್ತು. ಆದರೆ ಏಕಾಏಕಿ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಪೊಲಿಸರು ತನಿಖೆ ಮಾಡಿದರೆ ನಿಜ ಸಂಗತಿ ಹೊರ ಬರುತ್ತೆ.

ಕೊಪ್ಪಳ : ಇತ್ತೀಚಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಪ್ರಚಾರಕ್ಕಾಗಿ ಚೈತ್ರಾ ಕುಂದಪುರನನ್ನು ಪ್ರಚಾರಕ್ಕಾಗಿ ಕರೆತಂದಿದ್ದ ಶಾಸಕ ಪರಣ್ಣ ಮುನವಳ್ಳಿ ಚೈತ್ರಾ ಕುಂದಾಪೂರಳನ್ನು ನಾನು ಕರೆ ತಂದಿಲ ಎಂದು ಹೇಳಿಕೆ ನೀಡಿದ್ದರು. ಆದರೆ ನಂತರ ತಮ್ಮ ಮನೆಯಲ್ಲಿಯೇ ಚೈತ್ರಾ ಕುಂದಾಪುರಳನ್ನು ಸನ್ಮಾನಿಸಿದ್ದರು. ಆಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈಗ ಶಾಸಕ ಪರಣ್ಣ ಮುನವಳ್ಳಿ ಕುರಿತು ಚೈತ್ರಾ ಕುಂದಾಪೂರ ಅಸಭ್ಯವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ನಿಜವಾಗಿ ನಡೆದದ್ದೇನು ಎನ್ನುವದನ್ನು ಬಿಚ್ಚಿಟ್ಟಿದೆ.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯ ಗಂಡಸ್ತನ ಪ್ರಶ್ನೆ ಮಾಡಿರುವ ಚೈತ್ರಾ ಕುಂದಾಪೂರ ಚುನಾವಣೆಯ ಸಂದರ್ಭದಲ್ಲಿ ಕೋಮು ದ್ವೇಷದ ಭಾಷಣ, ನೀತಿ ಸಂಹಿತೆ ಉಲ್ಲಂಘನೆ, ಅನುಮತಿ ಇಲ್ಲದೇ ಕಾರ್ಯಕ್ರಮ ಹಿನ್ನೆಲೆ ಕೇಸ್ ದಾಖಲಿಸಿ ಬಂಧಿಸಲಾಗಿತ್ತು.ಆ ಕೇಸ್ ಗಳಿಗೆ ಶಾಸಕ ಪರಣ್ಣ ಮುನವಳ್ಳಿ ಬೇಲ್ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ಅಸಭ್ಯ, ಅಸಹ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಕೇಸ್ ದಾಖಲಾದ್ರು ಬೇಲ್ ಗಾಗಿ ಪರದಾಟ ನಡೆಸಿದ್ದ ಚೈತ್ರಾ ಕುಂದಾಪುರ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ನಾಲಿಗೆ ಹರಿಬಿಟ್ಟ ಚೈತ್ರಾ ಕುಂದಾಪುರ ಬೇಲ್ ಮಾಡಿಸಲು ಆಗದಿದ್ರೆ ಬಳೆ ತೊಟ್ಟುಕೊಂಡು ಮನೆಯಲ್ಲೆ ಕುಳಿತುಕೊಳ್ಳಲಿ ಬೇಲ್ ಮಾಡಿಸಲು ಯೋಗ್ಯತೆ ಇಲ್ಲಾ ಅಂದ್ರೆ, ಗಂಡಸ್ತನ ಇಲ್ಲ ಅಂದ್ರೆ ಮನೆಯಲ್ಲಿ ಕುಳಿತುಕೊಳ್ಳಲಿ ತಮ್ಮ ಕೆಲಸ ಆದ ಮೇಲೆ ಲಕ್ಷ ಲಕ್ಷ ದುಡ್ಡು ಮಾಡಿಕೊಂಡ್ರು ಇವರ ಎಲೆಕ್ಷನ್ ಗೆ ಬಂದು ನಾಯಿಗಳ ತರ ಕ್ಯಾಂಪೇನ್ ಮಾಡಿದ್ವಿ ಕೊಪ್ಪಳದಲ್ಲಿ ಗಂಗಾವತಿ ಪೊಲೀಸರು ಬಂದು ಅರೆಸ್ಟ್ ಮಾಡಿದ್ರೆ ಇವರಪ್ಪ ಬರ್ತಾರ ಬಿಡಿಸೋದಕ್ಕೆ ? ಇವರು ಬಳೆತೊಟ್ಟುಕೊಂಡು, ಮನೆಯಲ್ಲಿ ಕಳ್ಳೆಪೂರಿ ತಿಂತಿದ್ರಾ ? ಎಂದು ಅಸಭ್ಯವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿದೆ.

ಕೋಮುದ್ವೇಷದ ಭಾಷಣಕ್ಕೆ ಹೆಸರಾಗಿರುವ ಚೈತ್ರಾ ಕುಂದಾಪೂರ. ಇತ್ತೀಚಿಗೆ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಗೂಂಡಾಗಿರಿ ಮಾಡಿದ ಹಿನ್ನೆಲೆ ಬಂಧನದಲ್ಲಿರುವ ಚೈತ್ರಾ ಕುಂದಾಪೂರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ.

ಈ ಆಡಿಯೋ ದ ಬಗ್ಗೆ ಹಲವಾರು ದಿನಗಳಿಂದ ಗುಸು ಗುಸು ಕೇಳಿ ಬರುತ್ತಿತ್ತು. ಆದರೆ ಏಕಾಏಕಿ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಪೊಲಿಸರು ತನಿಖೆ ಮಾಡಿದರೆ ನಿಜ ಸಂಗತಿ ಹೊರ ಬರುತ್ತೆ.

ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿಯನ್ನು ಸೋಲಿಸಲು ಪರಣ್ಣ ಮುನವಳ್ಳಿ ಎಂತೆಂಥಹ ತಂತ್ರಗಳನ್ನು ಅನುಸರಿಸಿದ್ದರು ಎನ್ನುವುದು ಎಲ್ಲರಿಗೂ ಜಗಜ್ಜಾಹಿರಾಗಿದೆ. ಚುನಾವಣೆಯ ಸಂದರ್ಭದಲ್ಲಿ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ತುಂಬೆಲ್ಲಾ ತ್ವೇಷಮಯ ವಾತಾವರಣ ನಿರ್‍ಮಾಣವಾಗಿತ್ತು. ಆ ರೀತಿಯ ವಾತಾವರಣ ನಿರ್‍ಮಾಣವಾಗಲು ಕಾರಣ ಯಾರು ಎನ್ನುವುದು ಈಗ ಇಡೀ ಕ್ಷೇತ್ರದ ಜನತೆಗೆ ಗೊತ್ತಾಗಿದೆ.

Please follow and like us:
error