ಕೋಲಾರ : ಪೊಲೀಸ್ ವೇಷ ಧರಿಸಿ ದರೋಡೆ ಮಾಡುತ್ತಿದ್ದ ನಾಲ್ಕು ಜನ ದರೋಡೆಕೋರರ ಬಂಧಿಸಲಾಗಿದೆ.. ಕೋಲಾರ ಜಿಲ್ಲೆ ಮಾಲೂರು ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದ ಮಾಲೂರು ಕೈಗಾರಿಕಾ ಪ್ರದೇಶದ ಕೂರಂಡಹಳ್ಳಿ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಬಂಧಿಸಲಾಗಿದೆ.
ಬಂಗಾರಪೇಟೆ ಮೂಲದ ಅನಿಲ್ ಕುಮಾರ್ (32), ಶೇಷಾದ್ರಿ (21), ರಾಬಿನ್ (21), ಷಬೀರ್ (20) ಬಂಧಿತ ಆರೋಪಿಗಳು,ಬೈಕ್ ಗಳಿಗೆ ಪೋಲಿಸ್ ಎಂಬ ಸ್ಟೀಕರ್ ಅಂಟಿಸಿಕೊಂಡು, ಖಾಕಿ ಬಟ್ಟೆ ಧರಿಸಿ ದರೋಡೆಗೆ ಇಳಿಯುತ್ತಿದ್ದ ಖದೀಮರ ಕುರಿತ ಹಲವಾರು ದೂರುಗಳು ದಾಖಲಾಗಿದ್ದವು. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Please follow and like us: