ಪಾಲಕ್ಕಾಡ್: ಮೂವರು ಶಂಕಿತ ನಕ್ಸಲರ ಹತ್ಯೆ

ಕೊಚ್ಚಿ: ಕೇರಳದ ಪಾಲಕ್ಕಾಡ್ ನಲ್ಲಿ ಪೊಲೀಸರ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ನಕ್ಸಲರು ಹತ್ಯೆಯಾದ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಕರ್ನಾಟಕದ ಸುರೇಶ, ಶ್ರೀಮಂತಿ ಹಾಗೂ ತಮಿಳುನಾಡಿನ ಕಾರ್ತಿಕ್‌ ಎಂದು ಗುರುತಿಸಲಾಗಿದೆ.

ಅರಣ್ಯದಲ್ಲಿ ನಕ್ಸಲರು ಅವಿತಿರುವ ಖಚಿತ ಮಾಹಿತಿ ಆಧರಿಸಿ ಪಲಕ್ಕಾಡ್ ನ ಮಂಚಕಟ್ಟಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಕಮಾಂಡೊ ಪಡೆ, ಮೂವರನ್ನು ಹತ್ಯೆ ಮಾಡಿದೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ.

Please follow and like us:
error