ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ಪತಿರಾಯ : ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

ಕೊಪ್ಪಳ: ಇನ್ನು ೨೫  ಬದುಕು ಬಾಳುವ ವಯಸ್ಸು. ಆದ್ರೆ ವಿಧಿ ಆಕೆಯನ್ನು ಬಲಿ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಪತಿಯ ಇಡೀ ಕುಟುಂಬ ಸೇರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ದೇಹವೆಲ್ಲ ಶೇ ೯೦ ರಷ್ಟು  ಸುಟ್ಟು ನರಳಾಡಿ ಕೊನೆಗೆ ಕೊನೆಯುಸಿರು ಬಿಟ್ಟ ಮಹಿಳೆಯ ಸಾವಿನ ಘಟನೆ ಕೊಪ್ಪಳದ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದಲ್ಲಿ ಜರುಗಿದೆ.
ಒಂದು ಕಡೆ ಯವ್ವಾ….ಯವ್ವಾ ಅಂಥ ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿದ್ದ ಆ  ಮಹಿಳೆಯನ್ನು   ತಾಯಿ ಸಮಾಧಾನ ಮಾಡುತ್ತಿದ್ದಳು. ಶೇ ೯೦ ರಷ್ಟು ಸುಟ್ಟು ಗಾಯವಾದ ದೇಹದ ಮುಂದೆ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದರು. ಕೊಪ್ಪಳದ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದ ಮಂಜುಳಾ ಎಂಬ ಮಹಿಳೆಗೆ ಪತಿ ಹಾಗು ಆತನ ತಾಯಿ, ತಮ್ಮ, ತಂಗಿ ಸೇರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ನಿನ್ನೆ ತಡರಾತ್ರಿ ೯ ಗಂಟೆ ಸುಮಾರಿಗೆ ನಡೆದಿದೆ.
ವಿಷಯ ತಿಳಿದ ಕುಟುಂಬ ಸ್ಥರು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಮಂಜುಳಾನ ನೋಡಲು ಬಂದಿದ್ದಾರೆ. ವರದಕ್ಷಿಣೆ ಪಿಡುಗಿಗೆ ಈ ಮಹಿಳೆ ಬಲಿಯಾಗಿದ್ದಳೆ. ಮಂಜುಳಾಗೆ ಎರಡು ಮಕ್ಕಳಿದ್ದಾರೆ. ಪತಿ ಚೆನ್ನಪ್ಪನಿಗೆ  ಈಕೆ ಎರಡನೆ ಪತ್ನಿ ಅಂತೆ. ಪತಿರಾಯ ಚೆನ್ನಪ್ಪ ಕೆಲಸ ಮಾಡದೆ ಇಸ್ಪೀಟು ಆಡೋದು, ಕಂಠಪೂರ್ತಿ ಕುಡೊಯೋದು ಹಾಗು ಪತ್ನಿ ಮಂಜುಳಾಗೆ ಕಿರುಕುಳ ನೀಡೋದು ಅಂತ ಆಕೆಯ ಕುಂಟುಂಬಸ್ಥರು ಆರೋಪಿಸುತ್ತಾರೆ. ಅಲ್ಲದೆ, ಮಂಜುಳಾ ಅತ್ತೆ ಬಸಮ್ಮ ಮೈದುನ ಚೆಂದಾಲಿಂಗಪ್ಪ, ಚಿಕ್ಕವ್ವ ನಾಗಮ್ಮ ಕೂಡ ಕಿರುಕುಳ ನೀಡುತ್ತಿದ್ದರು ಅಂತ ಹೇಳುತ್ತಾರೆ. ಆ ಕಾರಣ ಎಲ್ಲರೂ ಸೇರಿ  ತನ್ನ ಮಗಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಅಂತ ಮಂಜುಳಾ ತಾಯಿ ಲಕ್ಷ್ಮಮ್ಮ ಹೇಳುತ್ತಾರೆ
ಎರಡನೆ ಮದುವೆಯಾದ್ರೂ ನನ್ನ ಮಗಳು ಸುಖವಾಗಿ ಇರುತ್ತಾಳೆ ಅಂತ ೫೦ ಸಾವಿರ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದೀವಿ. ಮಗಳು ಚೆನ್ನಾಗಿ ಇರುತ್ತಾಳೆ ಅಂದುಕೊಂಡಿವಿ. ಆದರೆ ಮದುವೆಯಾಗಿ ೩ ವರ್ಷ ಆದರೂ, ನನ್ನ ಮಗಳು ಸುಖವಾಗಿ ಜೀವನ ಮಾಡಲಿಲ್ಲ. ಕೂಲಿ ಕೆಲಸ ಮಾಡೋಕೆ ಹೋಗುತ್ತಿದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮಗಳನ್ನು ಕೊಂದು ಬಿಟ್ಟರು ಅಂತ ಮಂಜುಳಾ ತಾಯಿ ಲಕ್ಷ್ಮಮ್ಮ‌ ಕಣ್ಣಿರಿಟ್ಟರು.
ಸುಟ್ಟು ಬೆಡ್ ಮೇಲೆ ಮಲಗಿದ ಮಂಜುಳಾ ನನ್ನ‌ ನಾಲ್ಕು ಜನ ಸೇರಿ ಕೊಲ್ಲಲು ಪ್ರಯತ್ನ ಮಾಡಿದರು.‌ಕೂಲಿ ಕೆಲಸಕ್ಕೆ ಹೋಗಿಲ್ಲ ಅಂತ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು ಅಂತ ನರಳಾಡುತ್ತಾ ಹೇಳಿದರು. ಇನ್ನು ಮಂಜುಳಾ ಮೈದುನ ಚೆಂದಾಲಿಂಗಪ್ಪ ಪೊಲೀಸ್ ಕೆಲಸ ಮಾಡುತ್ತಾನೆ. ಆತನಿಂದ ನಿರಂತರ ಕಿರುಕುಳ ಇರುತ್ತಿತ್ತು ಎನ್ನುತ್ತಾರೆ. ಅಣ್ಣ, ತಮ್ಮ, ತಂಗಿ, ತಾಯಿ ಸೇರಿ ಕೊಲೆಗೆ ಯತ್ನ ಮಾಡಿ ಜಿಲ್ಲಾ ಆಸ್ಪತ್ರೆಗೆ  ದಾಖಲು ಮಾಡಿ ಹೋಗಿದ್ದಾರೆ.  ಇದೆಲ್ಲಾ ಅವರ. ಪ್ಲಾನಿಂಗ್ ಅವರಿಗೆ ಶಿಕ್ಷೆ ಆಗಬೇಕು ಅಂತ ಹೇಳುತ್ತಾರೆ ಮಂಜಳಾ ದೊಡ್ಡಪ್ಪ
ರಾಮಣ್ಣ
ಹೆಣ್ಣಾಗಿ ಹುಟ್ಟಿದ ಮಗು ಬಾಲ್ಯದಲ್ಲಿ ತಂದೆ ತಾಯಿಯ ಆಸರೆಯಲ್ಲಿ ಬೆಳೆದು ಯವ್ವನದಲ್ಲಿ ಗಂಡನ ಮನೆ ಸೇರ್ತಾಳೆ, ಗಂಡನೇ ಸರ್ವಸ್ವ ಎಂದುಕೊಂಡ ಪತ್ನಿಗೆ ಇಲ್ಲಿ ಪತಿಯೇ ಯಮನಾಗಿದ್ದಾನೆ.
ಈ ಪಾಪಿ ಪತಿರಾಯ ಚನ್ನಪ್ಪನ ಕಿರಿಕಿರಿ ತಾಳಲಾರದೆ ಮೊದಲ ಹೆಂಡತಿ ಮನೆಬಿಟ್ಟು ಹೋಗಿದ್ದಾಳಂತೆ. ಇದಾದ ಬಳಿಕ ಎರಡನೆ ಸಂಬಂಧಕ್ಕೆ ಮಂಜುಳನನ್ನು ಮದುವೆಯಾಗಿದ್ದ. ಈಗ ಮಂಜುಳಾನನ್ನು ತನ್ನ ಕುಟುಂಬದೊಂದಿಗೆ ಸೇರಿ ಬೆಂಕಿ ಹಚ್ಚಿ ಸುಟ್ಟು ಆಕೆಯ ಜೀವವನ್ನು ತೆಗೆದುಕೊಂಡಿದ್ದಾನೆ. ಈಗ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಂಜುಳಾ ಮೃತಪಟ್ಟಿದ್ದಾಳೆ. ಪತಿ ಚೆನ್ನಪ್ಪನನ್ನು  ಬೇವೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಚೆಂದಾಲಂಗಪ್ಪನನ್ನು ವಿಚಾರಣೆ ನಡೆಸಿದ್ದಾರೆ. ಒಟ್ಟಾರೆ ಪೊಲೀಸರು ಸೂಕ್ತ ತನಿಖೆ ನಡೆಸಿ ಮಂಜುಳಾ ಸಾವಿಗೆ ನ್ಯಾಯಕೊಡಿಸಬೇಕಂತ ಕುಟುಂಬಸ್ಥರು ಆಗ್ರಹಿಸಿದ್ದಾರೆ‌
Please follow and like us:
error