ದಂಪತಿಗಳು ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ನ. : ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದ ನಿವಾಸಿಗಳಾದ ಮುಕುಂದ ತಂದೆ ಯಮನಪ್ಪ ವಾಸ್ಟರ್ (೩೪), ಹಾಗೂ ಕಲಾವತಿ ಗಂಡ ಮುಕುಂದ ವಾಸ್ಟರ್ (೨೫), ಎಂಬ ದಂಪತಿಗಳು ನ.೧೨ ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಭ್ ಇನ್ಸ್‌ಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮುಕುಂದ ತಂದೆ ಯಮನಪ್ಪ ವಾಸ್ಟರ್ (೩೪), ಹಾಗೂ ಕಲಾವತಿ ಗಂಡ ಮುಕುಂದ ವಾಸ್ಟರ್ (೨೫), ಎಂಬ ದಂಪತಿಗಳು ನ.೧೨ ರಂದು ಮದ್ಯಾಹ್ನ ೩ ಗಂಟೆಯ ಸುಮಾರು ಹಾವೇರಿ ತಾಲೂಕಿನ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ದೇವಾಲಯದ ಧರ್ಶನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಕಾಣೆಯಾದ ದಂಪತಿಗಳ ಚಹರೆ ವಿವರ ಇಂತಿದೆ, ಮುಕುಂದ ತಂದೆ ಯಮನಪ್ಪ ವಾಸ್ಟರ್ (೩೪), ೫.೬ ಅಡಿ ಎತ್ತರ ಇದ್ದು, ಕೆಂಪು ಮೈಬಣ್ಣ, ದುಂಡುಮುಖ, ಸದೃಡ ಮೈಕಟ್ಟು ಹೊಂದಿದ್ದಾನೆ. ಎಡ ಕಾಲಿಗೆ ಪೊಲೀಯೋ ಆಗಿದ್ದು, ಕಪ್ಪು ಬಣ್ಣದ ಗುಂಗುರು ಕೂದಲುಗಳಿವೆ. ಕಾಣೆಯಾದ ದಿನ ಕಪ್ಪು ಚೌಕಡಿಯ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕಲಾವತಿ ಗಂಡ ಮುಕುಂದ ವಾಸ್ಟರ್ (೨೫), ೫ಅಡಿ ಎತ್ತರ ಇದ್ದು, ತೆಳ್ಳನೆಯ ಮೈಕಟ್ಟು, ಕೆಂಪು ಮೈಬಣ್ಣ ಹೊಂದಿದ್ದಾಳೆ. ಕಾಣೆಯಾದ ದಿನ ಹೂವಿನ ಡಿಸೈನ್ ಸೀರೆ, ಕೆಂಪು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ದಂಪತಿಗಳಿಬ್ಬರೂ ಕನ್ನಡ ಭಾಷೆ ಮಾತನಾಡುತ್ತಾರೆ.
ಈ ದಂಪತಿಗಳ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಪಿಎಸ್‌ಐ ಕೊಪ್ಪಳ ಗ್ರಾಮೀಣ ವೃತ್ತ-೦೮೫೩೯-೨೨೧೩೩೩, ೯೪೮೦೮೦೩೭೪೬, ಕೊಪ್ಪಳ ಎಸ್.ಪಿ ಕಚೇರಿ-೦೮೫೩೯-೨೩೦೧೧೧, ಡಿವೈಎಸ್‌ಪಿ-೦೮೫೩೯-೨೩೦೩೪೨, ೯೪೮೦೮೦೩೭೨೦, ಸಿಪಿಐ ಕೊಪ್ಪಳ-೯೪೮೦೮೦೩೭೩೧, ಕೊಪ್ಪಳ ಕಂಟ್ರೂಲ್ ರೂಂ ೦೮೫೩೯-೨೩೦೨೨೨-೧೦೦ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Please follow and like us:
error