ತಾವರಗೇರಾ : ಅಕ್ರಮ ಪಡಿತರ ಆಹಾರ ಧಾನ್ಯಗಳ ವಶ


ಕೊಪ್ಪಳ  : ಜಿಲ್ಲೆಯಲ್ಲಿ ಪಡಿತರ ಆಹಾರ ಧಾನ್ಯಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ಕುರಿತು ವಿವಿಧ ತಾಲೂಕುಗಳಲ್ಲಿ ದಾಳಿ ನಡೆಸಲಾಗುತ್ತಿದ್ದು, ಅದರಂತೆ ಮೇ 14 ರಂದು ಕುಷ್ಟಗಿ ತಾಲ್ಲೂಕಿನ ತಾವರಗೇರಾ ಎ.ಪಿ.ಎಂ.ಸಿ ಯಲ್ಲಿ ನಡೆದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ಮತ್ತು ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಂಡ ತಾವರಗೇರಾದ ಸಾಯಿನಾಥ ಟ್ರೇರ‍್ಸ್ ಮತ್ತು ಗುರುಕೃಪ ಎಂಟರ್‌ಪ್ರೆöÊಸಸ್ ಮೇಲೆ ನಡೆಸಿದ ದಾಳಿಯಲ್ಲಿ ರೂ. 9,80,603 ಮೌಲ್ಯದ, 372.5 ಕ್ವಿಂಟಾಲ್ ತೂಕದ ಒಟ್ಟು 1,253 ಅಕ್ಕಿ ಮೂಟೆಗಳನ್ನು ಹಾಗೂ ರೂ. 9,980 ಮೌಲ್ಯದ 4.5 ಕ್ವಿಂಟಾಲ್ ಗೋಧಿಯನ್ನು ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬAಧಿಸಿದAತೆ  ವೀರಭದ್ರಪ್ಪ ನಾಲತವಾಡ ಇವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಲಂ 3 ಮತ್ತು 7 ರನ್ವಯ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು,  ಕುಷ್ಟಗಿ ತಾಲೂಕಿನ ತಹಶೀಲ್ದಾರ್, ಆಹಾರ ನಿರೀಕ್ಷಕರು, ಎ.ಪಿ.ಎಂ.ಸಿ ಕಾರ್ಯದರ್ಶಿಗಳು, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಪೊಲೀಸ್ ಉಪನಿರೀಕ್ಷಕರ ತಂಡ ದಾಳಿ ನಡೆಸಿತ್ತು

Please follow and like us:
error