ಟ್ರ್ಯಾಕ್ಟರ್ ಪಲ್ಟಿ ನಾಲ್ವರ ಸಾವು

ಕೊಪ್ಪಳ :

ಟ್ರ್ಯಾಕ್ಟರ್ ಪಲ್ಟಿ ಮೂರು ಜನ ಸಾವು, 15ಕ್ಕೂ ಹೆಚ್ಚು ಜನ್ರಿಗೆ ಗಾಯವಾದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಮುಕ್ಕುಂಪಿ ಗ್ರಾಮದ ಬಳಿ ಘಟನೆ ನಡೆದಿದ್ದು ಹನುಮಂತಪ್ಪ(60), ಹುಲಿಗೇಮ್ಮ(40),ಅಂಬಮ್ಮ (70) ಮೃತ ದುರ್ದೈವಿಗಳು. ಇಂದು ನಡೆದಿದ್ದ ಪ್ರತಿಭಟನೆಗಾಗಿ ಕೊಪ್ಪಳಕ್ಕೆ ಬಂದಿದ್ದ ಕೂಲಿಕಾರರು ಮರಳಿ ಊರಿಗೆ ಮರಳುವಾಗ ಘಟನೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಟ್ರ್ಯಾಕ್ಟರ್ ಮೈಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನೊರ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸ್ ರ ಭೇಟಿ ಪರಿಶೀಲನೆ ನಡೆಸಿದರು.