ಜಿಲ್ಲೆಯಲ್ಲಿ ಅನಧೀಕೃತವಾಗಿ ಸಂಗ್ರಹಿಸಲಾದ 4120 ಕ್ಯೂ.ಮೀ. ಮರಳು ಜಪ್ತು : ಪಿ.ಸುನೀಲ್ ಕುಮಾರ್

ಕೊಪ್ಪಳ ಮೇ. :ಕೊಪ್ಪಳ ಜಿಲ್ಲೆಯಲ್ಲಿ ಅನಧೀಕೃತವಾಗಿ ಸಂಗ್ರಹಿಸಲಾದ ಅಂದಾಜು ಪ್ರಮಾಣದ ಸುಮಾರು 4120 ಕ್ಯೂ.ಮೀ. ಮರಳನ್ನು ಜಪ್ತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
ಅವರು ಇಂದು (ಮೇ. 10 ರಂದು) ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಕೊಪ್ಪಳ ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿ ಸಭೆಯಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿವಿಧ ಪ್ರಕರಣಗಳ ಅಡಿಯಲ್ಲಿ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆಗಳು ಅನಧೀಕೃತ ಮರಳು ಸಾಗಾಣಿಕೆ/ ದಾಸ್ತಾನುಗಳಿಂದ ವಶಪಡಿಸಿಕೊಳ್ಳಲಾದ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿಗಳು 1994ರ ತಿದ್ದುಪಡಿ ನಿಯಮ 2016ರ ನಿಯಮಾವಳಿಯಂತೆ ವಿಲೇ ಮಾಡುವ ಕುರಿತಂತೆ ಕೊಪ್ಪಳ ಜಿಲ್ಲೆಯ ವಿವಿಧ ಕಾಮಗಾರಿ ಅನುಷ್ಠಾನ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕೆ.ಆರ್.ಐ.ಡಿ.ಎಲ್., ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶ, ತಾಲೂಕು ಪಂಚಾಯತ್, ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸರಕಾರಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಇಲಾಖೆಗಳು ಹಾಗೂ ಸರಕಾರಿ ಇಲಾಖೆಗಳಿಂದ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎಸ್.ಆರ್. ದರದಂತೆ ರಾಜಧನ ಪಾವತಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಹದಾರಿ ಪರವಾನಗೆ ಪಡೆದು ಕಾಮಗಾರಿಗೆ ಮರಳನ್ನು ಬಳಸಿಕೊಳ್ಳಲು ಸೂಚಿಸಿದರು.
ಜಪ್ತು ಮಾಡಲಾದ ಮರಳು ವಿವರ;
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 30 ಕ್ಯೂ.ಮೀ 120 ಕ್ಯೂ.ಮೀ ಮರಳನ್ನು 2018ರ ಜೂನ್. 05 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಜಪ್ತಿ ಮಾಡಿಕೊಳ್ಳಲಾಗಿದೆ. 2018 ಡಿಸೆಂಬರ್. 27 ರಂದು ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಸೀಮಾದ ಬೂದಿಹಾಳ ಬ್ರಿಡ್ಜ/ ಬ್ಯಾರೇಜ್‌ನಲ್ಲಿ ಕೊಪ್ಪಳ ತಹಶೀಲ್ದಾರ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಭೂವಿಜ್ಞಾನಿ ಇವರಿಂದ 650 ಕ್ಯೂ.ಮೀ., 2019 ಫೆಬ್ರುವರಿ. 02 ರಂದು ಕಾರಟಗಿ ತಾಲೂಕಿನ ಮುಸ್ಟೂರ ಗ್ರಾಮದಲ್ಲಿ ಕಂದಾಯ ನಿರೀಕ್ಷಕರು ಸಿದ್ದಾಪೂರ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ 75 ಕ್ಯೂ.ಮೀ. ಹಾಗೂ ಗಂಗಾವತಿ ತಾಲೂಕಿನಲ್ಲಿ ಅನಧೀಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನಗಳಿಂದ 422 ಕ್ಯೂ.ಮೀ., 2018 ನವೆಂಬರ್. 26 ರಂದು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟೋಜಿ ಗ್ರಾಮ ಸೀಮಾದಲ್ಲಿ ಪೊಲೀಸ್ ಅಧಿಕಾರಿಗಳಿಂದ 97 ಕ್ಯೂ.ಮೀ., 2019 ಜನವರಿ. 15 ರಂದು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪೂರ ಹೋಬಳಿ ಕೃಷ್ಣಾಪೂರ ಸೀಮಾದಲ್ಲಿ ಪೊಲೀಸ್ ಅಧಿಕಾರಿಗಳಿಂದ 30 ಕ್ಯೂ.ಮೀ., ಜನವರಿ. 04 ರಂದು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಕಂಟೋಜಿ ಗ್ರಾಮದ ಹಳೆಯ ಸಮುದಾಯ ಭವನದ ಹತ್ತಿರ ಪೊಲೀಸ್ ಅಧಿಕಾರಿಗಳಿಂದ 65 ಕ್ಯೂ.ಮೀ., 2018 ಡಿಸೆಂಬರ್. 11 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಟೂರು ಕ್ಯಾಂಪ್‌ನಲ್ಲಿ 10 ಕ್ಯೂ.ಮೀ., 2018 ಜನವರಿ. 31 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 3000 ಕ್ಯೂ.ಮೀ. ಜಪ್ತಿ ಮಾಡಿ ಮರಳನ್ನು ಸಂಗ್ರಹಿಸಲಾಗಿತ್ತು (200 ಕ್ಯೂ.ಮೀ ಉಳಿಕೆಯಾಗಿರುತ್ತದೆ) ಇದರಲ್ಲಿ 17 ಕ್ಯೂ.ಮೀ. ಸ್ಟಾö್ಯಂಡರ್ಡ್ ಇನ್‌ಫ್ರಾಟೆಕ್ ಪ್ರೆöÊ.ಲಿ. ಇವರಿಗೆ ವಿಲೇ ಮಾಡಿದ್ದು 2925 ಕ್ಯೂ.ಮೀ. ದಲ್ಲಿ 925 ಕ್ಯೂ.ಮೀ. ಕಳ್ಳತನವಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2000 ಕ್ಯೂ.ಮೀ. ಉಳಿಕೆಯಾಗಿರುತ್ತದೆ. 2018 ಆಗಸ್ಟ್. 28 ರಂದು ತಾಲೂಕಿನ ಮುದ್ಲಾಪೂರ-ಕಿನ್ನಾಳ ಹಿರೇಹಳ್ಳ ಯೋಜನೆಯ ಪ್ರದೇಶದ ದಂಡೆಯಲ್ಲಿ ಸಂಗ್ರಹಿಸಿಡಲಾದ 346 ಕ್ಯೂ.ಮೀ., ಚಿಕ್ಕಸಿಂದೋಗಿ ಮತ್ತು ಹಿರೇ ಸಿಂದೋಗಿ ಹಿರೇಹಳ್ಳ ವ್ಯಾಪ್ತಿಯ ಪ್ರದೇಶದಲ್ಲಿ ಅಳವಂಡಿ ಪೊಲೀಸ್ ಅಧಿಕಾರಿಗಳಿಂದ 275 ಕ್ಯೂ.ಮೀ. ಜಪ್ತಿ ಮಾಡಲಾಗಿದ್ದು, ಮರಳನ್ನು ರಾಜಧನ ಪಾವತಿಸಲಾಗಿ ವಿಲೇವಾರಿ ಮಾಡಲಾಗಿದೆ. ಒಟ್ಟು 14 ಪ್ರಕರಣಗಳಲ್ಲಿ ಒಂದು ಪ್ರಕರಣ ದಾಖಲಾಗಿರುವುದಿಲ್ಲ ಹಾಗೂ ಇನ್ನೊಂದು ದಾಖಲಾದ ಪ್ರಕರಣ ಸೇರಿ ಈ ಎರಡು ಪ್ರಕರಣಗಳಲ್ಲಿ ಜಪ್ತು ಮಾಡಲಾದ ಮರಳಿನ ಅಂದಾಜು ಪ್ರಮಾಣವು ತಿಳಿದಿರುವುದಿಲ್ಲ.

Please follow and like us:
error