ಚೆನ್ನಮ್ಮ ಪಡೆಗೆ ಚಾಲನೆ ನೀಡಿದ ಎಸ್ಪಿ ರೇಣುಕಾ ಕೆ ಸುಕುಮಾರ್

Koppal Police News ಕೊಪ್ಪಳ ಜಿಲ್ಲೆಯ ಶಾಲಾ ಕಾಲೇಜುಗಳ ಆವರಣ, ಸಾರ್ವಜನಿಕ ಸ್ಥಳಗಳಾದ ಚಿತ್ರಮಂದಿರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಕಾಫಿ ಡೇ ಶಾಪ್, ಪಾನಿಪುರಿ ಅಂಗಡಿ, ಗೋಬಿ ಮಂಚೂರಿ, ಚಾಟ್ ಸೆಂಟರ್ ಇತ್ಯಾದಿ ಸ್ಥಳಗಳಲ್ಲಿ ಹಲವಾರು ಪುಂಡ ಪೋಕರಿಗಳು / ಬೀದಿ ಕಾಮಣ್ಣರು ಅಲ್ಲಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಕೀಟಲೆ ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಗಮನಕ್ಕೆ ಬಂದಿದ್ದರಿಂದ ವಿದ್ಯಾರ್ಥಿನಿಯವರಿಗೆ ಹಾಗೂ ಮಹಿಳೆಯರಿಗೆ ನ್ಯಾಯ ದೊರಕಿಸಿ ಸಮಾಜದಲ್ಲಿ ಶಾಂತತೆ ಮೂಡಿಸುವ ಹಿತದೃಷ್ಠಿಯಿಂದ ಪ್ರತಿ ಪೊಲೀಸ್ ಠಾಣೆ ಮಟ್ಟದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯವರನ್ನೊಳಗೊಂಡ “ಚೆನ್ನಮ್ಮ ಪಡೆ” ಯನ್ನು ಜಿಲ್ಲಾ ಪೊಲೀಸ್ ಅಧೀಕ್ಷರಾದ ರೇಣುಕಾ ಕೆ ಸುಕುಮಾರ ಚಾಲನೆ ನೀಡಿದರು.

ಮಹಿಳಾ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡದ ಸಿಬ್ಬಂದಿಯವರು ಬಾಲಕೀಯರ ಶಾಲಾ ಕಾಲೇಜು, ಚಿತ್ರಮಂದಿರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೇ ಪ್ರಮುಖ ಸ್ಥಳಗಳಲ್ಲಿ ಸಂಚರಿಸುತ್ತಿದ್ದು, ಬೀದಿ ಕಾಮಣ್ಣರು ವಿದ್ಯಾರ್ಥಿನಿಯರಿಗೆ ಅಥವಾ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಅಥವಾ ಕೀಟಲೆ ಮಾಡುವುದು ಕಂಡು ಬಂದರೆ ಕೂಡಲೇ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಫೋನ್ ನಂಬರ 100 ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲು ಸೂಚಿಸಲಾಗಿದೆ. ಈ ಬಗ್ಗೆ ಎಲ್ಲಾ ಠಾಣಾ ಮಟ್ಟದಲ್ಲಿ ವಿಶೇಷ ಜಾಗೃತಿಯನ್ನು ಮೂಡಿಸಲಾಗಿದೆ.