You are here
Home > Crime_news_karnataka > ಗೌರಿ ಲಂಕೇಶ್ ಹತ್ಯೆ: ಐಎಸ್ಎಫ್ ಕುವೈಟ್ ಖಂಡನೆ

ಗೌರಿ ಲಂಕೇಶ್ ಹತ್ಯೆ: ಐಎಸ್ಎಫ್ ಕುವೈಟ್ ಖಂಡನೆ

 

 

ಕರ್ನಾಟಕ ಕಂಡ ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಜಾತ್ಯಾತೀತತೆಯ ಪ್ರಬಲ ಪ್ರತಿಪಾದಕಿ, ತನ್ನ ತೀಕ್ಷ್ಣ ಬರಹಗಳಿಂದ ಫ್ಯಾಸಿಸ್ಟ್ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿದ್ದ ಗೌರಿ ಲಂಕೇಶ್ ಬರ್ಬರ ಹತ್ಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ತೀವ್ರವಾಗಿ ಖಂಡಿಸಿದೆ. ಗೌರಿಯವರ ಹತ್ಯೆಯಿಂದ ಕರ್ನಾಟಕದ ಜಾತ್ಯಾತೀತ ಹೋರಾಟದ ಧ್ವನಿಯು ಕ್ಷೀಣಗೊಂಡಂತಾಗಿದ್ದು, ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

 

ಪನ್ಸಾರೆ, ಕಲ್ಬುರ್ಗಿ ಮತ್ತು ದಾಬೋಲ್ಕರ್ ಅವರುಗಳನ್ನು ಕೊಂದ ಫ್ಯಾಸಿಸ್ಟ್ ಭಯೋತ್ಪಾದಕರನ್ನು ಸರ್ಕಾರವು ಇನ್ನೂ ಬಂಧಿಸಲು ವಿಫಲವಾಗಿರುವುದು ಕೊಲೆಗಾರರಿಗೆ ಗೌರಿ ಲಂಕೇಶ್ ರಂತಹ ಪ್ರಗತಿಪರರ ಹತ್ಯೆಗೆ ಪ್ರೇರಣೆ ನೀಡಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ. ಈ ಕೊಲೆಯು ದೇಶದ ಜಾತ್ಯಾತೀತ ಪ್ರಗತಿಪರ ಚಿಂತಕರಲ್ಲಿ ಭೀತಿಯನ್ನು ಉಂಟುಮಾಡಲು ಫ್ಯಾಸಿಸ್ಟ್ ಶಕ್ತಿಗಳ ವಿಫಲ ಪ್ರಯತ್ನವಾಗಿದ್ದು, ಗೌರಿ ಲಂಕೇಶ್ ಬಲಿದಾನವು ಕನ್ನಡ ನಾಡಿನಾದ್ಯಂತ ಫ್ಯಾಸಿಸ್ಟ್ ವಿರುದ್ಧ ತೀಕ್ಷ್ಣ ಹೋರಾಟಕ್ಕೆ ನಾಂದಿಯಾಗಬೇಕಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಪತ್ರಿಕಾ ಪ್ರಕಟನೆಯ ಮೂಲಕ ಕರೆ ನೀಡಿದೆ.

Top