ಗದಗ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ

Gadag News :  ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಸಾಪುರದಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಧರ್ಮದ ಅಶ್ರಫ್ ಅಲಿ (45), ಹಿಂದೂ ಧರ್ಮದ ಸೋಮವ್ವ (38) ಈ ದಂಪತಿಗಳು ಕಳೆದ 13 ವರ್ಷದ ಹಿಂದೆ ಇಬ್ಬರದೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 13 ವರ್ಷದ ನಂತರ ಮಹಿಳೆ ಪಾಲಕರನ್ನ ನೋಡಲು ಈ ದಂಪತಿಗಳು ಬಂದಿದ್ದರು. 

೧೩ ವರ್ಷದ ಹಿಂದೆ ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಅಣ್ಣನೇ ತಂಗಿ ಹಾಗೂ ತಂಗಿ ಗಂಡನನ್ನು ನಡು ಬೀದಿಯಲ್ಲೇ ಸುತ್ತಿಗೆಯಿಂದ ಕೊಲೆ ಮಾಡಿರೋ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುಳಗುಂದ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಬಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದು ಮರ್ಯಾದೆ ಗೇಡು ಹತ್ಯೆ ಎನ್ನೋ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಸೋಮವ್ವ ಬೋವಿ ಸಮಾಜದವಳಾಗಿದ್ದು, ಮುಸ್ಲಿಂ ಸಮಾಜದ ಅಶ್ರಫ್ ಅಲಿಯೊಂದಿಗೆ ಕಳೆದ ೧೩ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಆರಂಭದಲ್ಲಿ ಎರಡೂ ಕುಟುಂಬಗಳ ಮಧ್ಯೆಯಿದ್ದ ವೈಮನಸ್ಸು ತಣ್ಣಗಾಗಿದ್ದು, ಎರಡೂ ಕುಟುಂಬದವರೂ ಪರಸ್ಪರ ಅನ್ಯೂನ್ಯವಾಗಿದ್ರು. ಆದ್ರೆ ಸೋಮವ್ವಳ ಅಣ್ಣ ದೇವಪ್ಪನಿಗೆ ಈ ವಿಚಾರವಾಗಿ ಇದ್ದ ಸಿಟ್ಟು ಕಡಿಮೆಯಾಗಿರಲಿಲ್ಲ. ಇದರ ಮಧ್ಯೆ ಮಂಗಳೂರಲ್ಲಿ ವಾಸವಾಗಿದ್ದು, ಮೊಹರಂ ಹಬ್ಬಕ್ಕಾಗಿ ಆಗಮಿಸಿದ್ದ ದಂಪತಿಗಳು ಇಂದು ಬೆಳಿಗ್ಗೆ ಬಸಾಪುರ ಗ್ರಾಮಕ್ಕೆ ಬಂದಿದ್ರು. ವಿಷಯ ತಿಳಿದ ಸೋಮವ್ವಳ ಅಣ್ಣ ದೇವಪ್ಪ ಹೊಂಚು ಹಾಕಿ ಬೈಕ್ ನಲ್ಲಿ ಬರ್ತಿದ್ದ ದಂಪತಿಗಳನ್ನು ನಡು ರಸ್ತೆಯಲ್ಲೇ ದೊಡ್ಡ ಸುತ್ತಿಗೆಯಿಂದ ದಾರುಣವಾಗಿ ಹತ್ಯೆಗೈದಿದ್ದಾನೆ.  ಈ ದಂಪತಿಗಳ ಕೊಲೆ ಮಾಡಿ ಶಿರಹಟ್ಟಿ ಪೊಲೀಸರಿಗೆ ಶರಣಾಗಿದ್ದಾನೆ.

ನನಗೆ ಕಾಡುವ ಪ್ರಶ್ನೆ ಇಷ್ಟು ಸುಲಭವಾಗಿ/ಧೈರ್ಯವಾಗಿ ಮನಷ್ಯರನ್ನು ಕೊಲ್ಲುವ ಭಾವ ಸಮಾಜದಲ್ಲಿ ಬೆಳೆದದ್ದು ಹೇಗೆ ಎಂಬುದು . .? ನಾಳೆ ಕೊಂದವನನ್ನು ಸಮಾಜ ಹೀರೋ ಮಾದರಿ ಬಿಂಬಿಸದಿದ್ದರೆ ಸಾಕು. . .! ಛೇ… ಸಂಕುಚಿತ ಧಾರ್ಮಿಕತೆ ಸಮಾಜವನ್ನು ಎತ್ತಸಾಗಿಸುತ್ತಿದೆ ಎಂಬುದು ಸೊ ಕಾಲ್ಡ್ ಮಧ್ಯಮಪಂಥಿಯರಿಗೆ ಈಗಲಾದರೂ ಅರ್ಥವಾದರೆ ಸಾಕು… Kiran Gajanur

Please follow and like us:
error