ಗಂಗಾವತಿ ಪೋಲಿಸರ ಅಕ್ರಮದ ವಿರುದ್ದ ಕ್ರಮ – ಎಸ್ಪಿ ಅನೂಪ್ ಶೆಟ್ಟಿ

ಎಸ್ಪಿ ಅನೂಪ್ ಶೆಟ್ಟಿ ಹೇಳಿಕೆ – ಇದೊಂದು ಒಂದೇ ಕುಟುಂಬದವರ ನಡುವಿನ ವ್ಯವಹಾರಿಕ ಹಣಕಾಸಿನ ಜಗಳ. ಯಾವುದೇ ದೂರು ದಾಖಲಾದೇ ಇದ್ದರೂ ಸಹ  ಅವನನ್ನು ಬಂಧಿಸಲು ತೆರಳಿದ್ದ ಪೋಲಿಸರು ಠಾಣೆಗಾಗಲಿ, ಹಿರಿಯ ಅಧಿಕಾರಿಗಳಿಗಾಗಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಯಾರ ಅನುಮತಿ ಮತ್ತು ಆದೇಶದ ಮೇರೆಗೆ ಅವರು ಬಂಧಿಸಲು ತೆರಳಿದ್ದರು ಎನ್ನುವ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಠಾಣೆಗೆ ಮಾಹಿತಿ ಕೇಳಿದ್ದೇವೆ. ಮಾಹಿತಿ ಸಿಕ್ಕನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ಧಾರೆ. ಅಲ್ಲದೇ ಕಳ್ಳತನ ಎನ್ನುವುದು ಬೇರೆಯಾಗುತ್ತೆ. ಅರಿವಿಗೆ ಬಾರದಂತೆ ವಸ್ತುಗಳನ್ನು ಎತ್ತಿಕೊಳ್ಳುವುದು ಕಳ್ಳತನ ಆದರೆ ಅವರದೇನೋ ಮಾತಾಗಿದ್ದರೆ ದುಡ್ಡಿನ ವ್ಯವಹಾರವಾಗಿದ್ದರೆ ಅದು ಬೇರೆಯಾಗಿರುತ್ತೆ. ಅದರ ಬಗ್ಗೆ ತನಿಖೆ ಮಾಡುತ್ತೇವೆ.

Click for SP Statement

ಕೆಲ ಪೋಲಿಸರು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಗಳಾಗಿ ಕಾನೂನನ್ನೇ ತಮಗೆ ಬೇಕಾದ ರೀತಿಯಲ್ಲಿ ಬಳಸುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ದಕ್ಷ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್ಪಿ ಅನೂಪ್ ಶೆಟ್ಟಿಯವರು ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ನೋಡಬೇಕು ಎನ್ನುತ್ತಿದ್ದಾರೆ ಜನಸಾಮಾನ್ಯರು.

Please follow and like us:
error

Related posts