ಗಂಗಾವತಿ : ಅನಧಿಕೃತ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಗಂಗಾ ಬಾರ್, (ಸಿ.ಎಲ್-೯) ಹೋಟೆಲ್ ಸಮರ್ಥ ಬಾರ್, ಹೋಟೆಲ್ ಅಶೋಕ, ಸ್ವಾಗತ್, ಸನ್ಮಾನ್, ಸರ್ವೇಶ್, ಲಿಲತ್ ಮಹಲ್, ಎಸ್.ಎಸ್.ಎಲ್.ಆರ್, ಕಿಷ್ಕಿಂದಾ ರೆಸಾರ್ಟ, ಅಶ್ವಮೇಧ ಬಾರ್ ಸೇರಿದಂತೆ ಮದ್ಯದ ಅಂಗಡಿಗಳ ಹೊಂದಿರುವ ಅತಿಥಿ ಗೃಹಗಳಲ್ಲಿ ತಂಗಿರುವ ಅತಿಥಿಗಳಿಗೆ ಮಾತ್ರ ಮಧ್ಯ ಸರಬರಾಜು ಮಾಡುವ ನಿಯಮವಿದ್ದರೂ ಸಹ ಲೈಸೆನ್ಸ್ ಷರತ್ತುಗಳನ್ನು ಮೀರಿ ಗುಂಡಾಗಳ ಸಹಾಯದಿಂದ ಅನಧಿಕೃತ ವಾಗಿ ಸಾರ್ವಜನಿಕರಿಗೆ ಚಿಲ್ಲರೇ ಮಾರಾಟ ಮಾಡುತ್ತಿದ್ದಾರೆ

ಕೊಪ್ಪಳ: ಗಂಗಾವತಿ ತಾಲೂಕಿನಾದ್ಯಂತ ೧೪-ಸಿವಿಲ್ -೭ ಮಧ್ಯದ ಅಂಗಡಿಗಳಲ್ಲಿ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚುವರಿ ದರ ವಸೂಲಿ ಮಾಡುತ್ತಿದ್ದು ಹಾಗೂ ಲೈಸನ್ಸ್ ನಿಯಮ ಮೀರಿ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗಂಗಾವತಿ ನಾಗರಿಕ ಹಿತರಕ್ಷಣಾ ವೇದಿಕೆ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗಂಗಾವತಿ ತಾಲುಕಿನ ಪ್ರಭಾವಿ ರಾಜಕೀಯ ವ್ಯಕ್ತಿಗಳು ಇತ್ತಿಚೆಗೆ ನಡೆದ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಖೋಟಾ ನೋಟುಗಳು ಬಿಜೆಪಿ ಪಕ್ಷದಿಂದ ಚಲಾವಣೆಯಾಗಿದ್ದು, ಇದರ ಕುರಿತು ಈಗಾಗಲೇ ಜಿಲ್ಲೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಭಯಬೀತರಾದ ಬಿಜೆಪಿ ಮುಖಂಡರು ನಾಗರಿಕ ಸಮಿತಿಯನ್ನು ರಚಿಸಿಕೊಂಡು ಗಂಗಾವತಿ ಜನರ ಗಮನವನ್ನು ಬೇರೆಡೆ ಸೆಳೆಯಲು ಎಮ್.ಆರ್.ಪಿ ಬೆಲೆಗೆ ಮಧ್ಯ ಮಾರಾಟ ಮಾಡುವುದರ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಗಂಗಾವತಿ ತಾಲುಕಿನ ಬಿಜೆಪಿ ಮುಖಂಡರುಗಳಿಗೆ ಸೇರಿದ ಸುಮಾರು ೧೪ ಸಿಎಲ್-೭ ಮಧ್ಯದ ಅಂಗಡಿಗಳಲ್ಲಿ ಸರಕಾರದ ನಿಗದಿ ಪಡಿಸಿದ ದರಕ್ಕಿಂತ ದುಪ್ಪಟ್ಟು ಬೆಲೆಯಲ್ಲಿ ಮಧ್ಯ ಮಾರಾಟ ಮಾಡಲಾಗುತ್ತಿದ್ದು, ಇದರಲ್ಲಿ ಗಂಗಾ ಬಾರ್, (ಸಿ.ಎಲ್-೯) ಹೋಟೆಲ್ ಸಮರ್ಥ ಬಾರ್, ಹೋಟೆಲ್ ಅಶೋಕ, ಸ್ವಾಗತ್, ಸನ್ಮಾನ್, ಸರ್ವೇಶ್, ಲಿಲತ್ ಮಹಲ್, ಎಸ್.ಎಸ್.ಎಲ್.ಆರ್, ಕಿಷ್ಕಿಂದಾ ರೆಸಾರ್ಟ, ಅಶ್ವಮೇಧ ಬಾರ್ ಸೇರಿದಂತೆ ಮದ್ಯದ ಅಂಗಡಿಗಳ ಹೊಂದಿರುವ ಅತಿಥಿ ಗೃಹಗಳಲ್ಲಿ ತಂಗಿರುವ ಅತಿಥಿಗಳಿಗೆ ಮಾತ್ರ ಮಧ್ಯ ಸರಬರಾಜು ಮಾಡುವ ನಿಯಮವಿದ್ದರೂ ಸಹ ಲೈಸೆನ್ಸ್ ಷರತ್ತುಗಳನ್ನು ಮೀರಿ ಗುಂಡಾಗಳ ಸಹಾಯದಿಂದ ಅನಧಿಕೃತ ವಾಗಿ ಸಾರ್ವಜನಿಕರಿಗೆ ಚಿಲ್ಲರೇ ಮಾರಾಟ ಮಾಡುತ್ತಿದ್ದು ಗ್ರಾಮಿಣ ಭಾಗಗಳಲ್ಲಿ ಮಧ್ಯ ಸರಬರಾಜು ಮಾಡುತ್ತಿದ್ದಾರೆ. ಇದರ ಫಲವಾಗಿಯೇ ಗಂಗಾವತಿ ತಾಲೂಕ ಗ್ರಾಮಗಳ ಕಿರಾಣಿ ಅಂಗಡಿ, ಪಾನಬ್ ಬೀಡಾ ಅಂಗಡಿಗಳಲ್ಲಿ ಅನಧಿಕೃತವಾಗಿ ಮಧ್ಯ ಸಿಗುವಂತಾಗಿದೆ.
ಸದರಿ ಸಿ.ಎಲ್. ೭ ಸನ್ನದ್ದು ಹೊಂದಿರುವ ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಅನುಮಾನವಿದ್ದು ಇದೆಲ್ಲ ಅಕ್ರಮ ಮಧ್ಯ ಮಾರಾಟದಿಂದ ಬಂದ ಹಣದಲ್ಲಿ ಸಾಧ್ಯವಾಗುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಇದರಿಂದಾಗಿಯೇ ಗಂಗಾವತಿ ನಗರದಲ್ಲಿ ಗಲಭೆಗಳು ಸೌರ್ಜನ್ಯಗಳು ನಡೆಯುತ್ತಿವೆ. ಜಿಲ್ಲಾಡಳಿತವು ಈ ಸನ್ನದುದಾರರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಅಕ್ರಮಗಳಿಗೆ ಕಡಿವಾಣ ಕಾಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಇಲ್ಲವಾದಲ್ಲಿ ಗಂಗಾವತಿ ನಾಗರಿಕ ಹಿತ ರಕ್ಷಣ ವೇದಿಕೆ ವತಿಯಿಂದ ಸಾರ್ವಜನಿಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

https://youtu.be/EmlAjxnzsok

ಈ ಸಂದರ್ಭದಲ್ಲಿ ಅಧ್ಯಕ್ಷ ಎ. ಹುಲಗಪ್ಪ, ಡಾ. ಅಮರೇಶ ಬಂಡಿ, ಹಂಪೇಶ ಹರಿಗೋಲ, ಮನೋಹರ ಸ್ವಾಮಿ, ನಾಗರಾಜ ನಂದಾಪೂರ, ಸಂಜೀವಪ್ಪ ಕೆ. ಅಂಬಣ್ಣ, ಮಲ್ಲೇಶ ದೇವರಮನಿ, ದುರಗೇಶ ಅಕ್ಕಿರೊಟ್ಟಿ, ರಫೀಕ್, ಸುಬಾನ್ ಸಾಬ್ ಸೇರಿದಂತೆ ಇತರರು ಇದ್ದರು.