ಗಂಗಾವತಿಯ ಖಾಕಿ ದರ್ಪ ?

ಗಂಗಾವತಿ ಪೋಲಿಸರ ಮೇಲೆ ಕ್ರಮಕ್ಕೆ ಮುಂದಾದರೇ ಎಸ್ಪಿ ?

ಗಂಗಾವತಿ : ಗಂಗಾವತಿಯ ಬ್ಯಾಟರಿ ಕಳ್ಳತನದ ಪ್ರಕರಣ ಬಹಳಷ್ಟು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಆದರೆ ಈಗ ಕಳ್ಳತನದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಗಂಗಾವತಿಯ ನಗರಸಭೆಯ ನಾಮನಿರ್ದೇಶಿತ ಸದಸ್ಯ ಸಲ್ಮಾನ್ ಬಿಚ್ಚುಗತ್ತಿ ಮತ್ತು ಅವರ ಚಿಕ್ಕಪ್ಪ ಬಾಷಾ ಸಾಬ ಎನ್ನುವವರ ಪುತ್ರ sameerನ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ. ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಸಲ್ಮಾನ್ ಬಾಷಾ ನನಗೆ ದುಡ್ಡು ಕೊಡು ಇಲ್ಲವೇ ಬ್ಯಾಟರಿ ಕೊಡು ಎಂದು ಹೇಳಿದ್ಧಾನೆ. ದುಡ್ಡು ಇಲ್ಲದ ಕಾರಣಕ್ಕೆ ಬಾಷಾಸಾಬ ಪುತ್ರ ಬ್ಯಾಟರಿ ತೆಗೆದುಕೊಂಡು ಹೋಗು ಎಂದಿದ್ದಾನೆ. ಹೀಗಾಗಿ ಈ ಸಲ್ಮಾನ್ ಬ್ಯಾಟರಿ ಬಿಚ್ಚಿಕೊಂಡು ಬಂದಿದ್ದಾನೆ. ಆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಸಿಕ್ಕಿವೆ.

ಅದನ್ನೇ ಉಪಯೋಗಿಸಿಕೊಂಡು ನಂತರ ಸಲ್ಮಾನ್ ಬ್ಯಾಟರಿ ಕದ್ದಿದ್ಧಾನೆ ಅದರ ಸಿಸಿಟಿವಿ ವಿಜುವಲ್ಸ್ ಸಿಕ್ಕಿವೆ ಎಂದು ಸುಳ್ಳು ಆರೋಪ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣ ದಾಖಲಾಗದೇ ಇದ್ದರೂ ಸಹ ನಗರ ಠಾಣೆಯ ಇಬ್ಬರು ಪೋಲಿಸರು ಚಿರಂಜಿವಿ ಮತ್ತು ವಿಶ್ವನಾಥ ಎನ್ನುವವರು ಸಲ್ಮಾನ್ ನನ್ನು ಬಂಧಿಸಲು ಬಂದಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಅವರು ಬೇರೆ ಪಕ್ಷದ ಮುಖಂಡರೊಬ್ಬರಿಗೆ ಫೋನ್ ಮಾಡಿ ಮಾತನಾಡಿ ಸಲ್ಮಾನ್ ನನ್ನು ಹಿಡಿದಿದ್ದೇವೆ ಎಲ್ಲಿಗೆ ತರಬೇಕು ಎಂದು ಮಾತನಾಡಿದರು ಎಂದು ಸಲ್ಮಾನ್ ಆರೋಪ ಮಾಡುತ್ತಿದ್ದಾನೆ. ಇದರಿಂದ ಭಯಗೊಂಡ ಸಲ್ಮಾನ್ ಪೋಲಿಸರ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಅನೂಪ್ ಶೆಟ್ಟಿ ಇದೊಂದು ಒಂದೇ ಕುಟುಂಬದವರ ನಡುವಿನ ವ್ಯವಹಾರಿಕ ಹಣಕಾಸಿನ ಜಗಳ. ಆದರೆ ಅವನನ್ನು ಬಂಧಿಸಲು ತೆರಳಿದ್ದ ಪೋಲಿಸರು ಠಾಣೆಗಾಗಲಿ, ಹಿರಿಯ ಅಧಿಕಾರಿಗಳಿಗಾಗಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಯಾರ ಅನುಮತಿ ಮತ್ತು ಆದೇಶದ ಮೇರೆಗೆ ಅವರು ಬಂಧಿಸಲು ತೆರಳಿದ್ದರು ಎನ್ನುವ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಠಾಣೆಗೆ ಮಾಹಿತಿ ಕೇಳಿದ್ದೇವೆ. ಮಾಹಿತಿ ಸಿಕ್ಕನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ಧಾರೆ. ದಾಖಲಾಗಿರುವ ಪ್ರಕರಣ ಹಿಂಪಡೆಯಲು ಮುಂದಾಗಿದ್ದಾರೆ ಭಾಷಾ. ಒಟ್ಟಾರೆಯಾಗಿ ಕೆಲ ಪೋಲಿಸರು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಗಳಾಗಿ ಕಾನೂನನ್ನೇ ತಮಗೆ ಬೇಕಾದ ರೀತಿಯಲ್ಲಿ ಬಳಸುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ವಿವಿಧ ಒತ್ತಡಕ್ಕೆ ಸಿಕ್ಕಿ ಬಿದ್ದ ಗಂಗಾವತಿಯ ಪೋಲಿಸರು ಭಾಷಾರವರ ಮೇಲೆ ಒತ್ತಡ ಹೇರಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ದಕ್ಷ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್ಪಿ ಅನೂಪ್ ಶೆಟ್ಟಿಯವರು ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ನೋಡಬೇಕು ಎನ್ನುತ್ತಿದ್ದಾರೆ ಜನಸಾಮಾನ್ಯರು.

Please follow and like us:
error

Related posts