ಕೊಲೆ ಪ್ರಕರಣ : ಆರೋಪಿಯ ಬಂಧನ

Koppal ಕೊಪ್ಪಳ ಜಿಲ್ಲೆಯ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ : 03 – 03 – 2019 ರಂದು ಮಧ್ಯಾಹ್ನ 1 : 30 , ಗಂಟೆಗೆ ಶ್ರೀಮತಿ ರಾಚಮ್ಮ ಗಂಡ ಸಿದ್ದಪ್ಪ ಹುನುಗುಂದ ಸಾ : ಹಾನಗಲ್ ಇವರು ನೀಡಿದ ದೂರಿನ ಆಧಾರದ ಮೇಲೆ ಛಾಶಕೆ ಅಪರಾಧ ಸಂ : 44 / 2009 ಕಲಂ : 392 ಐಪಿಸಿ ಅಡಿ ಪ್ರಕರ್ರತೆ ದಾಖಲಾಗಿದ್ದು ಇದೆ . ನಂತರ ಈ ಪ್ರಕರಣದ ತ್ವರಿತ ಹಾಗೂ ವೈಜ್ಞಾನಿಕ ತನಿಖೆಗಾಗಿ ಜಿಲ್ಲಾ ಶ್ಲಾನ ಧಳ , ಬೆರಳಚ್ಚು ಘಟಕ ತಜ್ಞರ ಮತ್ತು ರ್ಗಂಕಯಂತ್ರ ವಿಭಾಗದ ಸಹಾಯದಿಂದ ದೊರೆತಂತಹ ಸುಳಿವಿನ ಆಧಾರದ ಮೇಲೆ ಹಾಗೂ ಮೇಲಾಧಿಕಾರಿಗಳಾದ ಶ್ರೀಮತಿ ರೇಣುಕಾ ಸುಕುಮಾರ ಜಿಲ್ಲಾ ಪೊಲೀಸ

ಅಧೀಕ್ಷಕರು , ಕೊಪ್ಪಳ ಹಾಗೂ ಎಸ್ . ಎಸ್ . ಹುಲ್ಲೂರ , ಪೊಲೀಸ್ ಉಪವಿಭಾಗಾಧಿಕಾರಿಗಳು ಉಪ ವಿಭಾಗ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಆರೋಪಿತನ ಶೀಘ್ರ ಪತ್ತೆಗಾಗಿ ಒಂದು ತಂಡವನ್ನು ರಚನೆ ಮಾಡಿ ಪತ್ತೆ ಕಾರ್ಯವನ್ನು ಗ್ರಾಮೀಣ ವೃತ್ತದ ಅಧಿಕಾರಿ ಹಾಗೂ ಸಿಬ್ಬಂದಿಯವರಾದ ಶ್ರೀ ಭೀಮಣ್ಣ ಎಂ . ಸೋರಿ , ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ ,ಗುರುರಾಜ ಕಟ್ಟಿಮನಿ , ಪಿ . ಎಸ್ . ಐ . ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿಯವರಾದ ಶ್ರೀ ಭರಮಪ್ಪ ಹೆಚ್ . ಸಿ . 203 , ಬಸವರಾಜ ನಾಯಕ , ಪಿಸಿ 170 , ನಾಗರಾಜ ಪಿಸಿ 125 ಗದ್ದೆಪ್ಪ ಪಿಸಿ – 274 , ಚಂದು ನಾಯ – ಪಿಸಿ – 544 ರವರಿಗೆ ವಹಿಸಲಾಯಿತು . ಪ್ರಕರಣದ ಸುಳಿವಿನ ಜಾಡನ್ನು ಹಿಡಿದು ಕಾರ್ಯ ಪ್ರವೃತ್ತರಾದ ತಂಡದ ಸದಸ್ಯರು ಆರೋಪಿತನಾದ ವಿರುಪಾಕ್ಷಿ & ವಿರುಪಣ್ಣ ಹಂದೆ ಈಶಪ್ಪ ಬೇವೂರ , 23 ವರ್ಷ ಜಾತಿ : ಲಿಂಗಾಯತ , ಉ : ಟ್ರಾಕ್ಟರ್ ಚಾಲಕ ಸಾ : ಗಂಗನಾಳ , ತಾ : ಕೊಪ್ಪಳ ಇವನನ್ನು ಇಂದು ದಿನಾಂಕ : 04 – 03 – 2019 ರಂದು ಬೆಳಗಿನ ಜಾವ 5 : 30 ಗಂಟೆಗೆ ಚಾಮಲಾಪೂರ ಗ್ರಾಮದಲ್ಲಿ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು ಬಂದು ವಿಚಾರಿಸಿ ಆತನು ಅನೈತಿಕ ಸಂಭಂದದ ಹಿನ್ನಲೆಯಲ್ಲಿ ಕೊಲೆ ಮಾಡಿರುವದಾಗಿ ತಪ್ಪನ್ನು ಒಪ್ಪಿಕೊಂಡು ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ಹಾದಿಯನ್ನು ಬಚ್ಚಿಟ್ಟಿದ್ದನ್ನು ಕರೆದುಕೊಂಡು ಹೋಗಿ ತೋರಿಸಿ ಹಾಜರಪಡಿಸಿದ ಪ್ರಕಾರ ಜಪ್ತಿ ಪಡಿಸಿಕೊಳ್ಳಲಾಯಿತು . ಹಾಗೂ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು . ಈ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪ್ರಯತ್ನಿಸಿದ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಶ್ಲಾಘನೆ ವ್ಯಕ್ತ ಪಡಿಸಿರುತ್ತಾರೆ .

Please follow and like us:
error