ಕೊಪ್ಪಳ ಪೋಲಿಸರ ಕಾರ್ಯಾಚರಣೆ : ಸರಗಳ್ಳರ ಬಂಧನ

ಒಂದೂವರೆ ವರ್ಷಗಳಿಂದ ಕೊಪ್ಪಳ ನಗರದ ಸುತ್ತಮುತ್ತ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಕೊಪ್ಪಳ ಪೋಲಿಸರು ಭೇದಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಮಹಾನಗರಗಳಲ್ಲಿ ನಡೆಯುವಂತಹ ಬೈಕ್ ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಸರಗಳ್ಳರ ಹಾವಳಿ ವಿಪರೀತವಾಗಿತ್ತು. ಅಲ್ಲದೇ ಒಂಟಿ ಮಹಿಳೆಯರು ಓಡಾಡುವುದೇ ಕಷ್ಟಕರ ಎನ್ನುವಂತಹ ಪರಿಸ್ಥಿತಿ ನಿರ‍್ಮಾಣವಾಗಿತ್ತು. ಪುರುಷೋತ್ತಮ ಜೂಡಿ ಹಾಗೂ ಪ್ರಮೋದ ಪಾಟೀಲ್ ಎನ್ನುವ ಇಬ್ಬರನ್ನು ಬಂಧಿಸಲಾಗಿದೆ. ಸರಗಳ್ಳತನದ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಸರಗಳ್ಳರು ಕೊಪ್ಪಳ ಮೂಲದವರೇ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

ಸರಗಳ್ಳತನದ ರೀತಿ ನೋಡಿದವರಿಗೆ ಇದು ಯಾರೋ ಹೊರಗಿನವರ ಕೆಲಸ ಎನ್ನುವಂತಿತ್ತು. ಪುರುಷೋತ್ತಮ ಜೂಡಿ ಎನ್ನುವ ವ್ಯಕ್ತಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ. ಪ್ರಮೋದ ಪಾಟೀಲ್ ಕೆಲಸವಿಲ್ಲದೇ ಅಲೆದಾಡುತ್ತಿದ್ದ. ಇವರಿಬ್ಬರೂ ಸಹ ಕೊಪ್ಪಳದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು. ಬಂಧಿತರಿಂದ ೯ ಪ್ರಕರಣಗಳಲ್ಲಿ ಕಳ್ಳತನ ಮಾಡಲಾಗಿದ್ದ ಅಂದಾಜು ಆರು ಲಕ್ಷ ತೊಂಬತ್ತು ಸಾವಿರ ಮೌಲ್ಯದ ೨೩೦ ಗ್ರಾ ಬಂಗಾರದ ಆಭರಣಗಳನ್ನು ವಶಪಡೆಸಿಕೊಳ್ಳಲಾಗಿದೆ. ಇವರಿಂದ ಬಂಗಾರದ ಆಭರಣಗಳನ್ನು ಖರೀದಿಸಿದ್ದ ಮೂವರನ್ನೂ ಸಹ ಬಂಧಿಸಲಾಗಿದೆ. ಕಳ್ಳತನಕ್ಕೆ ಉಪಯೋಗಿಸಲಾಗಿದ್ದ ೩ ಬೈಕ್ ಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಪ್ಪಳ ಮತ್ತು ಭಾಗ್ಯನಗರದ ಹೊರವಲಯದಲ್ಲಿ ಕಳ್ಳತನ ಮಾಡುತ್ತಿದ್ದ ಇವರನ್ನು ಪೇದೆಯೊಬ್ಬರ ಪತ್ನಿ ಗುರುತಿಸಿದ್ದರು. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ಧಾಗ ಬಂಧಿಸಿ ತಂದು ತೀವ್ರ ವಿಚಾರಣೆ ಮಾಡಿದಾಗ ಕಳ್ಳತನದ ಎಲ್ಲಾ ಪ್ರಕರಣಗಳು ಬಯಲಿಗೆ ಬಂದಿವೆ. ಡಿವೈಎಸ್ಪಿ ಎಸ್.ಎಂ.ಸಂದಿಗವಾಡ ಮಾರ್ಗದರ್ಶನದಲ್ಲಿ ನಗರ ಠಾಣೆಯ ಸಿಪಿಐ ರವಿ ಉಕ್ಕುಂದರ ನೇತೃತ್ವದ ತಂಡ  ರಮೇಶ ಮಡ್ಡಿಕರ, ಫಕಿರಪ್ಪ, ಮಹೇಶ, ಪ್ರಕಾಶ್, ಬಕ್ಷಿದಸಾಬ್, ಪ್ರವೀಣ, ಆನಂದ, ಬಸಪ್ಪ ಸಜ್ಜನ, ಚೆನ್ನಪ್ಪಮ ರೇವಣಸಿದ್ದಪ್ಪ, ರಾಜಶೇಖರ, ಯಲ್ಲಪ್ಪ, ನಿಸಾರ‍್ ಅಹ್ಮದ್, ಮರಿಯಪ್ಪರ ತಂಡ
ಕಳ್ಳರನ್ನು ಬಂಧಿಸಿದೆ.

Please follow and like us:

Related posts