You are here
Home > Crime_news_karnataka > ಕೊಪ್ಪಳ ನಗರದಲ್ಲಿ ಕಳ್ಳತನ ಮಾಡಿದ ಆರೋಪಿತರಿಗೆ ಶಿಕ್ಷೆ

ಕೊಪ್ಪಳ ನಗರದಲ್ಲಿ ಕಳ್ಳತನ ಮಾಡಿದ ಆರೋಪಿತರಿಗೆ ಶಿಕ್ಷೆ


ಕೊಪ್ಪಳ ನ. ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಜ್ಜಿ ಓಣಿ ನಿವಾಸಿಗಳಾದ ಆನಂದ ಹರಣಿಶಿಕಾರಿ, ಮೈಲಾರಿ ಹರಣಿಶಿಕಾರಿ, ಸಣ್ಣಗಂಗ ಹರಣಿಶಿಕಾರಿ, ಸೋಮಪ್ಪ ಹರಣಿಶಿಕಾರಿ ಮತ್ತು ಅದಲು ಹರಣಿಶಿಕಾರಿ, ಇವರು ನಗರದ ವಿವಿಧೆಡೆಗಳಲ್ಲಿ ಕಳ್ಳತನ ಮಾಡಿರುವ ಆರೋಪವು ಸಾಭಿತಾಗಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಆರೋಪಿತರಿಗೆ ಶಿಕ್ಷೆ ವಿಧಿಸಿದ್ದಾರೆ.
೨೦೧೫-೧೬ನೇ ಸಾಲಿನಲ್ಲಿ ಕೊಪ್ಪಳ ನಗರದ ವಿವಿಧಡೆ ಮನೆಗಳ ಬೀಗ ಮುರಿದು ಒಳಹೊಕ್ಕು ಮನೆಯಲ್ಲಿದ್ದ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಆರೋಪ ಬೇರೆ-ಬೇರೆ ೦೫ ಪ್ರಕರಣಗಳ ತನಿಖೆಯಲ್ಲಿ ಸಾಭಿತಾಗಿದ್ದರಿಂದ ಆರೋಪಿತ ವಿರುದ್ಧ ಕೊಪ್ಪಳ ನಗರ ಪೊಲೀಸರು ದೋಪಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಆರೋಪಿತರಾದ ಆನಂದ ಹರಣಿಶಿಕಾರಿ, ಮೈಲಾರಿ ಹರಣಿಶಿಕಾರಿ, ಸಣ್ಣಗಂಗ ಹರಣಿಶಿಕಾರಿ, ಸೋಮಪ್ಪ ಹರಣಿಶಿಕಾರಿ ಮತ್ತು ಅದಲು ಹರಣಿಶಿಕಾರಿ, ಇವರ ಮೇಲಿನ ಒಟ್ಟು ಐದು ಪ್ರಕರಣಗಳಲ್ಲಿನ ಕಳ್ಳತನದ ಆರೋಪ ಸಾಬಿತಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿ.ಜೆ.ಎಂ. ಕುಮಾರ ಎಸ್. ರವರು ಆರೋಪಿತರಿಗೆ ತಲಾ ಪ್ರಕರಣಗಳಲ್ಲಿ ೦೩ ವರ್ಷ ಸದಾ ಜೈಲು ಶಿಕ್ಷೆ ಹಾಗೂ ತಲಾ ರೂ. ೪೦೦೦ ಗಳ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ. ಸರ್ವಮಂಗಳ ಅವರು ವಾಧಿಸಿದ್ದರು .

Top