ಕೊಪ್ಪಳ : ದುರ್ಗಾದೇವಿಯ ಕಾಣಿಕೆ ಹುಂಡಿಯನ್ನೇ ಕದ್ದೊಯ್ದ ಕಳ್ಳ CCTV visuals

ದುರ್ಗಾದೇವಿಯ ಮುಂದೆ ಇದ್ದ  ಹುಂಡಿಯನ್ನೇ ಕದ್ದೊಯ್ದ ಕಳ್ಳ. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಲಭ್ಯ. ದುಡ್ಡು ತೆಗೆದುಕೊಂಡು ಕಾಣಿಕೆ ಪೆಟ್ಟಿಗೆಯನ್ನು ಬೀಸಾಡಿ ಪರಾರಿಯಾಗಿರುವ ಕಳ್ಳ

ದುರ್ಗಾದೇವಿಯ ಕಾಣಿಕೆ ಪೆಟ್ಟಿಗೆಯನ್ನು ಕಳ್ಳನೋರ್ವ ಹೊತ್ತೊಯ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ದಸರಾ ಹಬ್ಬದ ನಿಮಿತ್ಯ ಕೊಪ್ಪಳದ ಗಡಿಯಾರ ಕಂಬದ ಬಳಿ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.  ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಸಿಕ್ಕಿವೆ.