ಕೊಪ್ಪಳ ಎರಡು ಪ್ರತ್ಯೇಕ ಅಪಘಾತ : ಇಬ್ಬರ ಸಾವು

ಕೊಪ್ಪಳ : ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪಿದ್ದಾರೆ. ಗಂಗಾವತಿ ರಸ್ತೆಯ ಮೆಡಿಕಲ್ ಕಾಲೇಜ್ ಎದುರಿಗೆ ನಡೆದ ಅಪಘಾತದಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಕಾವಲುಗಾರ ಸ್ಥಳದಲ್ಲಿಯೇ ಸಾವನ್ನಪಿದ್ದಾನೆ.

ಅಸ್ಸಾಂ ಮೂಲದ ಪೂರ್ನಜಾಯ್ ರಿಯಾಂಜ್ ಮೃತ ಯುವಕ.ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಯುವಕ ರಸ್ತೆ ದಾಟುವಾಗ ಮೇಲೆ ಹರಿದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಅಪಘಾತದಲ್ಲಿ ಕ್ಯಾಂಟರ್ – ಟ್ಯಾಂಕರ್ ನಡುವೆ ಡಿಕ್ಕಿ ಕ್ಯಾಂಟರ್ ಚಾಲಕ ಸಾವನ್ನಪ್ಪಿದ್ದಾನೆ.

ಭಾನಾಪೂರ ಹತ್ತಿರರದ ಗದಗ ರಸ್ತೆಯಲ್ಲಿ ಅಪಘಾತ ನಡೆದಿದ್ದು ಆಂದ್ರ ಕಡಪಾದ ಚಾಲಕ ವಿ.ಚೆನ್ನಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ೧೫ ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಿಎಸೈ ರಾಘವೇಂದ್ರ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Please follow and like us:
error