ಕಾಲು ಜಾರಿ ಕಾಲುವೆಗೆ ಬಿದ್ದು ಮಗು ಮೃತ

ಕೊಪ್ಪಳ: ಕಾಲು ಜಾರಿ ಕಾಲುವೆಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ, ಕೊಪ್ಪಳದ ಕಾರಟಗಿ ತಾಲೂಕಿನ ಹಳ್ಳಿಹಾಳ ಬಳಿಯ ಯರ್ರಮ್ಮ ಕ್ಯಾಂಪ್ ಲ್ಲಿ ಜರುಗಿದೆ, ಚಿಟ್ಟಿ (3) ವರ್ಷ ಬಾಲಕಿ ಮೃತ ಪಟ್ಟಿದ್ದು, ಮನೆ ಹಿಂದೇ ಹರಿಯುವ  ಕಾಲುವೆಯಲ್ಲಿ ಆಕಸ್ಮಿಕವಾಗಿ ಕಾಲುವೇ ಬಳಿ ತೆರಳಿದ ಮಗು ಜಾರಿ ಬಿದ್ದಿದ್ದು ಮೃತಪಟ್ಟಿದ್ದಾಳೆ. ಹೊಲದಲ್ಲಿ ಕೆಲಸ ಮಾಡುವವರ ಕಣ್ಣಿಗೆ ಬಿದ್ದ ಮೃತ ಬಾಲಕಿಯ ಶವ ಪತ್ತೆಯಾಗಿದೆ.ಊರ ಹಿಂದೆನೇ ಹರಿಯುವ ದೊಡ್ಡ ಕಾಲುವೆಗೆ ಯಾವುದೇ ರಕ್ಷಣ ಕ್ರಮ ಕೈಗೊಳ್ಳದ ಕಾರಣ ಈ ಘಟನೆ ನಡೆದಿದೆ ಅಂತ ಸ್ಥಳಿಯರು ಹೇಳುತ್ತಾರೆ. ಕಾರಣ ಪಂಚಾಯತಿ ಕಾಲುವೆ ದಡದಲ್ಲಿ ರಕ್ಷಣ ತಂತಿ ಹಾಕುವಂತೆ ಒತ್ತಾಯಿಸಿದ್ದು, ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ಜರುಗಿದೆ.