ಕಳ್ಳತನ ಪ್ರಕರಣ ಬೇದಿಸಿದ ಪೋಲಿಸರು : ಕಳ್ಳರ ಬಂಧನ

Koppal , ಯಲಬುರ್ಗಾ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಸನ್ 2018 ನೇ ಸಾಲಿನ ನವಂಬರ್ ತಿಂಗಳಲ್ಲಿ ತಳಕಲ್ ಗ್ರಾಮದಲ್ಲಿ ಬೀಗ್ ಹಾಕಿದ ಮನೆಯನ್ನು ಹಗಲು ಕಳ್ಳತನವಾದ ಬಗ್ಗೆ ಅದೇ ರೀತಿ ಸಪ್ಟಂಬರ್ ತಿಂಗಳಲ್ಲಿ ತಳಕಲ್ ಗ್ರಾಮದ ಬೀಗ ಹಾಕಿದ ತಳಕಲ್ ಗ್ರಾಮದಲ್ಲಿ ಸನ್ 2017ನೇ ಸಾಲಿನಲ್ಲಿ ಜನವರಿ ತಿಂಗಳಲ್ಲಿ ಚಾಮಪೂರ ಗ್ರಾಮದಲ್ಲಿ ಭೀಗ್ ಹಾಕಿದ ಮನೆಯನ್ನು ಹಾಗೂ ಸನ್ 2018 ನೇ ಸಾಲಿನಲ್ಲಿ ಜುಲೈ ತಿಂಗಳಲ್ಲಿ ಯಲಬುರ್ಗಾ ಪಟ್ಟಣದಲ್ಲಿ ಬೀಗ್ ಹಾಕಿದ ಮನೆಗಳನ್ನು ಹಗಲಿನಲ್ಲಿ ಗ್ ಮುರಿದು ಯಾರೋ ಕಳ್ಳರು ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕ್ರಮವಾಗಿ ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ . 236 / 2018 , 181 / 2018 ಮತ್ತು 02 / 2017 ಕಲಂ . 454 , 380 ಐ . ಪಿ . ಸಿ ಹಾಗೂ ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ . 11112018 ಕಲಂ , 454 , 380 ಐ . ಪಿ . ಸಿ ನೇದ್ದರಲ್ಲಿ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ . – ಸದರಿ ಪ್ರಕರಣಗಳಲ್ಲಿ ಆರೋಪಿ ಹಾಗೂ ಮುದ್ದಮಾಲಿನ ಪತ್ರ ಕುರಿತು ನನ್ನ ಹಾಗೂ ಎಸ್ , ಎಮ್ , ಸಂದಿಗವಾಡ ರವರ ಮಾರ್ಗದರ್ಶನದಲ್ಲಿ ಸಿ . ಪಿ . ಐ ಯಲಬುರ್ಗಾ ವೃತ್ತ ರವರ ನೇತೃತ್ವದಲ್ಲಿ ಪಿಎಸ್ . ಐ , ಕುಕನೂರ , ಬೇವೂರ , ಯಲಬುರ್ಗಾ ಹಾಗೂ ಸಿಬ್ಬಂದಿಯವರಾದ ಮಲ್ಲೇಶಪ್ಪ , ಸಿ . ಹೆಚ್ . ಸಿ – 26 ,ಕಲ್ಲಪ್ಪ , ಸಿ . ಹೆಚ್ . ಸಿ – 207 , ಇಮಾಮಹುಸೇನ ಸಿ . ಹೆಚ್ . ಸಿ – 02 , ಸೋಮಶೇಖರ , ಸಿ . ಹೆಚ್ . ಸಿ – 184 , ಶರಣಪ್ಪ , ಸಿ . ಹೆಚ್ . ಸಿ – 143 , ಶ್ರೀ ವಿನೋದ , ಸಿ . ಪಿ . ಸಿ – 372 , ದೇವೇಂದ್ರ , ಸಿ . ಪಿ . ಸಿ – 120 ಕೋಟೇಶ್ , ಸಿ . ಪಿ . ಸಿ – 150 , ಮಂಜುನಾಥ , ಸಿ . ಪಿ . ಸಿ – 137 , ಶರಣಪ್ಪ , ಸಿ . ಪಿ . ಸಿ – 154 , ಮಹಾಂತಗೌಡ , ಸಿ . ಪಿ . ಸಿ – 392 , ಹಾಗೂ ಟೇಪ್ ಚಾಲಕರಾದ ಕಳ್ಳತನ ಶರಣಪ್ಪ ಎ . ಪಿ . ಸಿ – 25 , ಕಾಶಿ , ಎ . ಹೆಚ್ . ಸಿ – 49 ಹಾಗೂ ಸಿ . ಡಿ . ಆರ್ . ಘಟಕದ ಶ್ರೀ ಪ್ರಸಾದ ಮತ್ತು ಬಸವರಾಜ ರವರ = ತಿಬ್ಬಂದಿಯನ್ನೊಳಗೊಂಡ ಎರಡು ತಂಡಗಳನ್ನು ರಚಿಸಿ ಆರೋಪಿತರ ಪತ್ತೆ ಕುರಿತು ಕಳುಹಿಸಿಕೊಟ್ಟಿದ್ದು ಇರುತ್ತದೆ . | ನಂತರ ಸದರಿ ಆರೋಪಿತರ ಪತ್ತೆ ಕಾರ್ಯದಲ್ಲಿದ್ದಾಗ ಸದರಿ ತಂಡದವರಿಗೆ ನಿನ್ನೆ ದಿನಾಂಕ : 09 – 01 – 2018 ರಂದು ಸದರಿ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಆರೋಪಿತರಾದ 1 ) ಹನುಮಂತ ತಂದೆ ಯಲ್ಲಪ್ಪ ಕಾತರಗಿ ವಯಾ : 23 ವರ್ಷ , ಜಾ : ಮುಚಿಗೇರ ಉ : ಕೂಲಿ ಕೆಲಸ ಸಾ : ಮರಿಯಮ್ಮನಗುಡಿ ಕ್ರಾಸ್ , ಮುಚಿಗೇರ ಓಣಿ , ಭಾಗ್ಯನಗರ , ಕೊಪ್ಪಳ ಮತ್ತು 2ಬಸವರಾಜ ತಂದೆ ಈರಪ್ಪ ಮಂಗಳೂರ ವಯಾ : 24 ವರ್ಷ , ಜಾ : ಮುಚಿಗೇರ ಉ : ಕೂಲಿ ಕೆಲಸ ಸಾ : ವಿಜಯನಗರ ಬಡಾವಣೆ , ಕೊಪ್ಪಳ ಇಬ್ಬರೂ ಈ ಮೇಲ್ಕಾಣಿಸಿದ ಪ್ರಕರಣಗಳಲ್ಲಿ ಹಾಗೂ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಎರಡು ಪ್ರಕರಣಗಳಲ್ಲಿ ಒಟ್ಟು 06 ಪ್ರಕರಣಗಳಲ್ಲಿ ಬೀಗ್ ಹಾಕಿದ ಮನೆಗಳನ್ನು ಹಗಲಿನಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡು ತಮ್ಮ ಸ್ವಖುಷಿ ಹೇಳಿಕೆಗಳನ್ನು ನೀಡಿದ್ದು ಸದರಿ ಸ್ವಖುಷಿ ಹೇಳಿಕೆಗನುಗುಣವಾಗಿ ಸದರಿ ಆರೋಪಿತರು ತಾವು ಕಳ್ಳತನ ಮಾಡಿ ಮುಚ್ಚಿಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಆರೋಪಿ 3 ) ರಮೇಶ ತಂದೆ ವೀರುಪಾಕ್ಷಗೌಡ ವಣಗೇರಿ ಪಯಾ : 21 ವರ್ಷ , ಜಾಲಿಂಗಾಯತ ಉಪಾನ್‌ಶಾಪ್‌ ಸಾ : ಓಜಿನಹಳ್ಳಿ ತಾ . ಜಿ . ಕೊಪ್ಪಳ ಇತನು ಕಳ್ಳತನ ಮಾಡಿದ ಮುದ್ದೆಮಾಲು ಅಂತಾ ತಿವರು ಈ ಮೇಲ್ಕಾಣಿಸಿದ ಆರೋಪಿತರಿಂದ ಸ್ವೀಕರಿಸಿದ ಬಂಗಾರದ ಆಭರಣಗಳನ್ನು ತನ್ನ ಮನೆಯಲ್ಲಿ ಮುಚ್ಚಿಟ್ಟಿದ್ದವುಗಳನ್ನು ತೋರಿಸಿ ಹಾಜರು ಪಡಿಸಿದ ಮೇರೆಗೆ ಪಂಚರ ಸಮಕ್ಷಮ ಜಪ್ಪು ಪಡಿಸಿಕೊಂಡಿದ್ದು ಇರುತ್ತದೆ . ಸದರಿ ಆರೋಪಿತರಿಂದ ಈ ಮೇಲಿನ ಒಟ್ಟು 06 ಕಳ್ಳತನ ಪ್ರಕರಣಗಳಲ್ಲಿ 227 . 5 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ 50 ಗ್ರಾಂ ಬೆಳ್ಳಿಯ ಆಭರಣಗಳನ್ನು ಹೀಗೆ ಒಟ್ಟು ಅಂ . ಕಿ . 5 , 78 , 300 = 00 ರೂ . ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಎರಡು ಮೋಟಾರ ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ . ಸದರಿ ಪ್ರಕರಣವನ್ನು ಭೇದಿಸಿದ ಈ ಮೇಲ್ಕಂಡ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಸಾಧನೆಯನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಲಾಗಿದೆ .

Please follow and like us:
error