ಕನಕಗಿರಿ ಪೊಲೀಸರಿಂದ ಭಾರಧ್ವಾಜ್‌ರ ಮೇಲೆ ಪ್ರಕರಣ ದಾಖಲು

ಕನಕಗಿರಿ ಪೊಲೀಸರಿಂದ ಭಾರಧ್ವಾಜ್‌ರ ಮೇಲೆ ಪ್ರಕರಣ ದಾಖಲು
ದಿ  ೨೪  ರಂದು ತಿಪ್ಪನಾಳ ಕೆರೆಯಲ್ಲಿ ಬೆಳೆದು ನಿಂತ ಬೆಳೆಯನ್ನು ನಾಶ ಮಾಡುತ್ತಿರುವ ಪೊಲೀಸರನ್ನು ಪ್ರಶ್ನಿಸಿದ್ದಕ್ಕಾಗಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂ: ೧೩೬/೨೦೧೭ ರಲ್ಲಿ ಭಾರಧ್ವಾಜ್‌ರ ವಿರುದ್ಧ ಸೆಕ್ಷನ್ ೧೪೩, ೧೪೭, ೪೪೭, ೧೮೩, ೧೮೬, ೧೮೮, ೩೫೩ ಮತ್ತು ೧೪೯ ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿದ್ದಾರೆ. ೨೬ ದಲಿತ ಕುಟುಂಬಗಳು ೯೪ ಎಕರೆಯಲ್ಲಿ ಬಿತ್ತಿದ ಸಜ್ಜೆ, ನವಣೆ, ತೊಗರಿ, ಸೌತೆಕಾಯಿಯಂತಹ ಸುಮಾರು ೧೫ ಲಕ್ಷ ರೂಪಾಯಿ ಬೆಲೆಬಾಳುವ ಕಟಾವಿಗೆ ಬಂದಿರುವಂತಹ ಬೆಳೆಯನ್ನು ನಾಶಪಡಿಸಿದ ಜಿಲ್ಲಾಡಳಿತ ಮತ್ತು ಪೊಲೀಸರ ದೌರ್ಜನ್ಯದಿಂದ ಅನ್ಯಾಯಕ್ಕೊಳಗಾದ ದಲಿತರಿಗೆ ನ್ಯಾಯಕ್ಕಾಗಿ ದಿನಾಂಕ: ೨೭.೦೯.೨೦೧೭ ರಂದು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಠಾವಧಿ ಧರಣ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ೧೮ ಜನ ದಲಿತರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿ ಮತ್ತು ಹೋರಾಟಗಾರ ಭಾರಧ್ವಾಜ್‌ರ ಮೇಲೆ ಪ್ರಕರಣ ದಾಖಲಿಸಿ ದಲಿತರ ಹೋರಾಟಗಳನ್ನು ದಮನ ಮಾಡುವ ಕುತಂತ್ರ ನಡೆದಿದೆ. ಸಿ.ಪಿ.ಐ.ಎಂ.ಎಲ್ ಪಕ್ಷ ದಲಿತ ಸಂಘರ್ಷ ಸಮಿತಿ ಭೀಮವಾದ, ಕರ್ನಾಟಕ ರೈತ ಸಂಘ, ಎ.ಐ.ಸಿ.ಟಿ.ಯು ಮತ್ತು ದಲಿತರ ಸಂಘಟನೆಗಳು ಪ್ರಗತಿಪರ ಸಂಘಟನೆಗಳ ಒಕ್ಕೂಟ ತಿಪ್ಪನಾಳ ಕೆರೆಯ ದಲಿತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ದಿನಾಂಕ: ೨೭.೦೯.೨೦೧೭ ರಿಂದ ನಡೆಯುವ ಅನಿರ್ಧಿಷ್ಟ ಧರಣಿಯಲ್ಲಿ ಪ್ರಗತಿಪರರು ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಮಾಡುತ್ತಿದೆ

Please follow and like us:
error