ಆಸ್ತಿ ಆಸೆಗಾಗಿ ಹೆಂಡತಿ ,ಮಗನನ್ನು ಮನೆಯಿಂದ ಹೊರ ಹಾಕಿದ ತಂದೆ

ಆಸ್ತಿ ಆಸೆಗಾಗಿ ಹೆಂಡತಿ ಹಾಗೂ ಮಗನನ್ನು ಮನೆಯಿಂದ ಹೋರ ಹಾಕಿದ ತಂದೆ. ಆಸ್ತಿಗೆ ಸಹಿ ಮಾಡಲಿಲ್ಲ ಎಂಬ ಕಾರಣಕ್ಕೆ ಮಗನನ್ನೆ ಬೆಂಕಿ ಹಚ್ಚಿ ಸುಡಲು ಹೋಂದ ಪಾಪಿ ತಂದೆ. ತಂದೆಯ ವಿರುದ್ದ ಪ್ರಕರಣ ದಾಖಲಿಸಲು ಹೋದರೆ ಕ್ರಮ ಕೈಗೋಳ್ಳದ ಪೋಲಿಸರು… 

ಹಣ ಎಂದರೆ ಹೆಣ ಕೂಡಾ ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ. ಹಣದ ಮುಂದೆ ಯಾರು ಕೂಡಾ ದೋಡ್ಡವರಲ್ಲ ಎಂಬುದೇ ಈ ಗಾದೆ ಮಾತಿ ಅನ್ವರ್ಥ. ಹಾಗಾದರೆ ನಾವೇಕೆ ಈ ಗಾದೆ ಮಾತು ಹೇಳುತ್ತಿದ್ದೇವೆ ಎಂದು ಕೋಂಡಿದ್ದಾರೆ. ಹೌದು ಇಲ್ಲೋಬ್ಬ ಮಹಾಶಯ ಹಣದ ಆಸೆಗೆ ತನ್ನ ಜೋತೆ ಸಪ್ತಪದಿ ತುಳಿದು ಮದುವೆಯಾದ ಹೆಂಡತಿ ಹಾಗು ತನ್ನ ಸ್ವಂತ ಮಗನನ್ನೆ ಮನೆಯಿಂದ ಹೋರ ಹಾಕಿದ್ದಾನೆ. ಮನೆಯಿಂದ ಹೋರ ಹಾಕಿದರೆ ಮುಗಿತು ಎಂದು ಆತ ಅಷ್ಕಕ್ಕೆ ಕೈ ಕಟ್ಟಿ ಕುಳಿತಿಲ್ಲ. ಹೇಗಾದರೂ ಮಾಡಿ ಮಗ ಹಾಗೂ ಹೆಂಡತಿಯನ್ನು ಕೂಡಾ ಸಾಯಿಸಬೆಕು ಅಂದು ಕೋಂಡಿದ್ದಾನೆ. ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಕೂಡಾ ಆತ ಮಾಡಿದ್ದಾನೆ.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಅಮಾನಗವೀಯ ಘಟನೆ ಒಂದು ನಡೆದಿದೆ. ಮುಧೋಳ ಗ್ರಾಮದ ಕಲಕನಗೌಡ ಎಂಬಾತ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಬೇಕು ಎಂದು ಹೋಂಚು ಹಾಕಿದ್ದಾನೆ. ಆದರೆ ಆತ ತನ್ನ ಆಸ್ತಿಯನ್ನು ಮಾರಬೇಕು ಎಂದರೆ ಆತನ ಹೆಂಡತಿ ಹಾಗೂ ಮಗನ ಸಹಿ ಕೂಡಾ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಆಸ್ತಿ ವಿಚಾರವಾಗಿ ಹೆಂಡತಿ ಶಾರಮ್ಮ ಹಾಗೂ ಮಲ್ಲನಗೌಡನಿಗೆ ಸಹಿ ಮಾಡಿ ಎಂದು ಕೇಳಿಕೋಂಡಿದ್ದಾನೆ. ಆದರೆ ಶಾರಮ್ಮ ಹಾಗೂ ಮಗ ಮಲ್ಲೇಶಗೌಡ ಇದಕ್ಕೆ ಒಪ್ಪದಿದ್ದಾಗ ಅವರನ್ನು ಹೋಡೆದು ಮನೆಯಿಂದ ಹೋರ ಹಾಕಿದ್ದಾನೆ. ಅಷ್ಟಕ್ಕೆ ಇವರನ್ನು ಸುಮ್ಮನೇ ಬಿಡದೇ ಮಗ ಮಲ್ಲೇಶ್ ಗೌಡನಿಗೆ ಹೇಗಾದರೂ ಮಾಡಿ ಸಾಯಿಸದಿದರೆ ಈ ಆಸ್ತಿಯನ್ನೆಲ್ಲ ತಾನೇ ಕಬಳಿಸಬಹುದು ಎಂದು ತಿಳಿದ ಕಲಕನಗೌಡ ಮಗನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟಿದ್ದಾನೆ. ಈ ಕುರಿತು ಯಲಬುರ್ಗಾ ಠಾಣೆಗೆ ಪ್ರಕರಣ ದಾಖಲಿಸಲು ಹೋದರೆ ಠಾಣೆಯ ಪೋಲಿಸರು ಪಾಪ ಶಾರಮ್ಮ ಹಾಗೂ ಮಲ್ಲೇಶಗೌಡನಿಗೆ ದಬಾಯಿಸಿ ಕಳುಹಿಸಿದ್ದಾರೆ. ಆದರೆ ಮಗ ಮಲ್ಲೇಶಗೌಡ ಹೆಗೋ ಪ್ರಾನಾಪಾಯದಿಂದ ಪಾರಾಗಿದ್ದಾನೆ. ಈ ಭೂಪ ತಂದೆಯ ಸಹವಾಸವೇ ಬೇಡ ಎಂದು ತಾಯಿ ಶಾರಮ್ಮ ಹಾಗೂ ಮಗ ಮಲ್ಲನಗೌಡ ಇಬ್ಬರೂ ಸೇರಿ ಬಾಡಿಗೆ ಮನೆಯೋಂದರಲ್ಲಿ ವಾಸವಾಗಿದ್ದಾರೆ…

ಕಳೆದ ಹಲವು ವರ್ಷಗಳಿಂದ ಹೆಂಡತಿ ಹಾಗೂ ಮಗನಿಗೆ ತೋಂದರೆ ಕೋಡುತ್ತಿರುವ ಹಿನ್ನಲೆಯಲ್ಲಿ ಇವರು ಗ್ರಾಮ ತೊರೆದು ಗದಗ ಜಿಲ್ಲೆಯ ನರೇಗಲ್ ನಲ್ಲಿ ವಾಸವಾಗಿದ್ದಾರೆ. ಆದರೆ ಅವರಿಗೆ ಅಲ್ಲಿಯೂ ಕೂಡಾ ನೆಮ್ಮದಿಯಿಂದ ಇರಲು ಬಿಡದ ಕಲಕನಗೌಡ ಅಲ್ಲಿಯೂ ಕೂಡಾ ತೋಂದರೆ ನೀಡುತ್ತಿದ್ದಾನಂತೆ. ದಿಕ್ಕು ಕಾಣದ ತಾಯಿ ಮಗ ಈಗ ಭಿಕ್ಷುಕರಂತೆ ಊರುರು ಅಲೆದು ಬಸ್ ನಿಲ್ದಾಣ, ಮಠ ಮಂದಿರಗಳಲ್ಲಿ ರಾತ್ರೀ ಕಾಲ ಕಳೆಯುತ್ತಿದ್ದಾರೆ. ಇನ್ನು ಕಲಕನಗೌಡನಿಗೆ ಇಬ್ಬರು ಮಕ್ಕಳಿದ್ದು ಬಸನಗೌಡ ಹಾಗೂ ಮಲ್ಲೇಶಗೌಡ ಎಂಬಾತರ ಇಬ್ಬರದ್ದೂ ಮದುವೆಯಾಗಿದೆ. ಆದರೆ ಬಸನಗೌಡ ಎಂಬಾತ ತಂದೆ ಮಾತನ್ನು ಕೇಳಿಕೋಂಡು ಮುಧೋಳ ಗ್ರಾಮದಲ್ಲಿಯೇ ಬೆರೋಂದು ಮನೆಯಲ್ಲಿ ವಾಸವಾಗಿದ್ದಾನೆ. ಆದರೆ ಮಲ್ಲೇಶಗೌಡನ ಹೆಂಡತಿ ಮಾತ್ರ ತಾನು ಮಾವನ ಜೋತೆಗೆ ಇರುತ್ತೇನೆ ನಿನ್ನ ಜೋತೆ ಬರುವದಿಲ್ಲ ಎಂದು ಹೇಳಿ ಮುಧೋಳ ಗ್ರಾಮಲ್ಲಿಯೇ ಇದ್ದಾಳಂತೆ. ಇನ್ನು ಮಲ್ಲೆಶ್ ಗೌಡ ನನಗೆ ನನ್ನ ಹೆಂಡತಿ ಬೇಕು ನಮಗೆ ಯಾವುದೇ ರೀತಿಯಲ್ಲಿ ಕಿರುಕುಳ ಆಗದಂತೆ ನಮಗೆ ಪೋಲಿಸರು ರಕ್ಷಣೆ ನೀಡಬೇಕು ಎಂದು ಅಳಲನ್ನು ತೋಡಿಕೋಳ್ಳುತ್ತಾನೆ. ಈ ಕುರಿತು ಈಗಾಗಲೇ ಎಸ್.ಪಿ ಅವರ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜವಾಗದ ಹಿನ್ನಲೆಯಲ್ಲಿ ತಾಯಿ ಮಗ ಈಗ ದಿಕ್ಕು ತೋಚದಂತಾಗಿ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ…

ರಕ್ಷಕರೇ ಭಕ್ಷರಾದಾಗ ರಕ್ಷಣೆ ಕೇಳೂವದು ಯಾರನ್ನು ಎಂದು ಪಾಪ ತಾಯಿ ಮಗ ಇಬ್ಬರೂ ಸೇರಿ ಕಣ್ಣೀರು ಹಾಕುತ್ತಾ ಈಗ ಬಿದಿ ಬೀದಿ ಅಲೆಯುತ್ತಿದ್ದಾರೆ. ರಕ್ಷಣೆ ನೀಡಬೇಕಾದ ಯಲುಬುರ್ಗಾ ಠಾಣೆಯ ಪೋಲಿಸರು ಲಂಚದ ಆಸೆಗೆ ಬಲಿಯಾಗಿ ಇಷ್ಟೋಂದು ಅಮಾನವೀಯವಾಗಿ ನಡೆದುಕೋಳ್ಳುವದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನಾದರೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಈ ತಾಯಿ ಮಗನಿಗೆ ರಕ್ಷಣೆ ನೀಡಲು ಮುಂದಾಗುತ್ತಾರೋ ಅಥವಾ ತಮ್ಮ ಹಳೆ ಚಾಳಿಯನ್ನೇ ಮುಂದುವರೆಸುತ್ತಾರೋ ಕಾದು ನೋಡಬೇಕಿದೆ..