ಆಕಳು ಕಳ್ಳರ ಬಂಧನ

ಯಲಬುರ್ಗಾ : ದಿ. 26ರಂದು ಯಲಬುರ್ಗಾ ತಾಲ್ಲೂಕಿನ ಹಗೇದಾಳ, ಬೂನಕೊಪ್ಪ ಸೀಮಾದ ಜಮೀನಿನಲ್ಲಿ ಇರುವ ಮನೆಯಲ್ಲಿ ಕಟ್ಟಿಹಾಕಿದ್ದ ಒಟ್ಟು 86000/- ರೂ ಬೆಲೆಬಾಳುವ ಎರಡು ಎತ್ತು ಹಾಗೂ ಎರಡು ಆಕಳನ್ನು ಹಾಗೂ  ಕುಕನೂರ ತಾಲ್ಲೂಕಿನ ಬೆದವಟ್ಟಿ ಗ್ರಾಮದ ಹತ್ತಿರ ಜಮೀನಿನ ಮನೆಯಲ್ಲಿ ಕಟ್ಟಿಹಾಕಿದ್ದ ಒಟ್ಟು 37000 ರೂ ಬೆಲೆ ಬಾಳುವ ಎತ್ತು ಮತ್ತು ಆಕಳನ್ನು ಕಳ್ಳತನ ಮಾಡಿದ ಬಗ್ಗೆ ಯಲಬುರ್ಗಾ ಠಾಣೆಯಲ್ಲಿ ಹಾಗೂ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣಗಳಲ್ಲಿ ಆರೋಪಿ ಹಾಗೂ ಎತ್ತು ಮತ್ತು ಆಕಳುಗಳ ಪತ್ತೆ ಕುರಿತು ಕೊಪ್ಪಳ ಎಸ್ಪಿ ಹಾಗೂ ವೆಂಕಟಪ್ಪ ನಾಯಕ ಡಿ.ಎಸ್‌.ಪಿ.ಕೊಪ್ಪಳರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ  ಎಂ. ನಾಗರೆದ್ದಿ ಸಿ.ಪಿ.ಐ.ಯಲಬುರ್ಗಾ ಮತ್ತು ವೃತ್ತದ ಹನುಮಂತಪ್ಪ ತಳವಾರ ಪಿ.ಎಸ್‌.ಐ. ಯಲಬುರ್ಗಾ, ಎನ್‌ ವೆಂಕಟೇಶ ಪಿ.ಎಸ್‌.ಐ ಕುಕನೂರ.  ಶಂಕರ ಸಾಯಕ ಪಿ.ಎಸ್‌ ಐ ಬೇವೂರ ಹಾಗೂ ಸಿಬ್ಬಂದಿಯವರಾದ  ನಿಸ್ಸಾರ ಅಹ್ಮದ್‌ ಸಿ.ಹೆಚ್‌.ಸಿ-245, ವೆಂಕಟೇಶ ಸಿಪಿ.ಸಿ-353.ಮಹೇಶ ಸಿ.ಪಿ.ಸಿ-348,ಮಹಾಂತಗೌಡ. ಸಿ.ಪಿ.ಸಿ-392, ತಮ್ಮನಗೌಡ ಸಿ.ಪಿ.ಸಿ.231,  ಮಹಾಂತೇಶ ಸಿ.ಹೆಚ್‌.ಸಿ-247. ರವಿಶಂಕರ ಸಿ.ಪಿ.ಸಿ-133,  ಹನುಮಂತಪ್ಪ ಹೆಚ್‌.ಸಿ.267 ಹಾಗೂ ಜೀಪ್‌ ಚಾಲಕರಾದ  ಶರಣಪ್ಪ ಎ ಪಿ.ಸಿ-25,  ಬಸಯ್ಯ ಎ.ಪಿ.ಸಿ.208, ಸಿ.ಡಿ.ಆರ್‌.ಘಟಕದ  ಕೋಟೇಶ ರವರ ಸಿಬ್ಬಂದಿಯನ್ನೊಳಗೊಂಡ ಮೂರು ತಂಡಗಳನ್ನು ರಚಿಸಿ ಸಲಾಗಿತ್ತು.  ಆರೋಪಿತರ ಪತ್ತೆ ಕಾರ್ಯದಲ್ಲಿದ್ದಾಗ ಸದರಿ ತಂಡದವರಿಗೆ ದಿನಾಂಕ.26-05-2020 ರಂದು ಸದರಿ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಆರೋಪಿತರಾದ ಎ1-ಸದ್ದಾಂಹುಸೇನ ತಂದೆ ಬಾಷಾಸಾಬ್‌ ಪೈಲವಾನ ವಯಾ:20 ವರ್ಷ, ಜಾ:ಮುಸ್ಲಿಂ ಉಸತಾಲಕ ಸಾ:ಬ್ಯಾಲವಾಡಗಿ, ಮುಂಡರಗಿ ಪಟ್ಟಣ, ತಾ:ಮುಂಡರಗಿ ಜಿ:ಗದಗ. ಎ2-ಜೀಲಾನಿ ತಂದೆ ರಾಜಾಸಾಬ್‌ ಜಾತಗಾರ ವಯಾ:25 ವರ್ಷ, ಜಾ:ಮುಸ್ಲಿಂ ಉ:ಕೂಲಿ ಕೆಲಸ ಸಾ:ಆಶ್ರಯ ಕಾಲೋನಿ, ಪೇಠಾಲೂರ ತಾ:ಮುಂಡರಗಿ ಜಿ:ಗದಗ. ಹಾಗೂ ಒಬ್ಬ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕ ಮೂರು ಜನರನ್ನು ಪತ್ತೆ ಮಾಡಿ ಸದರಿಯವರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದ್ದು ಸದರಿ ಮೂರು ಜನರು ಸೇರಿ ಹಗೇದಾಳ. ಬೂನಕೊಪ್ಪ ಸೀಮಾದಲ್ಲಿ ಹಾಗೂ ಬೆದವಟ್ಟಿ ಹತ್ತಿರ ಈ ಮೇಲ್ಕಾಣಿಸಿದ ಪ್ರಕರಣಗಳಲ್ಲಿ ಎತ್ತು ಮತ್ತು ಆಕಳುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡು ತಮ್ಮ ಸ್ವಖುಷಿ ಹೇಳಿಕೆಗಳನ್ನು ನೀಡಿದ್ದು ಇರುತ್ತದೆ.

ಸದರಿ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಒಂದು ಹೊಸ ಬೊಲೆರೋ ಪಿಕಪ್‌ ವಾಹನ, ಒಂದು ಡಿಸ್ಕವರಿ ಮೋಟಾರ್‌ ಸೈಕಲ್‌ ಹಾಗೂ ಹಗ್ಗ. ರಾಡ್‌ ಗಳು ಮತ್ತು ಮೂರು ಮೊಬೈಲ್‌ ಹಾಗೂ 9000 ರೂ. ನಗದು ಹಣವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದನ್ನು ಭೇದಿಸಿದ ಈ ಮೇಲ್ಕಂಡ ಎಲ್ಲಾ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯವರ ಸಾಧನೆಯನ್ನು ಎಸ್ಪಿ  ಶ್ರೀಮತಿ ಜಿ.ಸಂಗೀತಾ ಶ್ಲಾಘೀಸಿದ್ದಾರೆ.

Please follow and like us:
error