ಆಂದ್ರಪ್ರದೇಶ : ಬೀಕರ ಅಪಘಾತ ಬಳ್ಳಾರಿ ಮೂಲದ ನಾಲ್ವರ ಸಾವು

ಪ್ರಕಾಶಂ ( ಎಪಿ) : ಆಂಧ್ರ್ರಪ್ರದೇಶದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ ಬಳ್ಳಾರಿ ಮೂಲದ ನಾಲ್ಕು ಜನರು ಮೃತ ಪಟ್ಟ ಘಟನೆ ನಡೆದಿದೆ‌. ಲಾರಿ ಮತ್ತು ತುಫಾನ್ ಗೂಡ್ಸ್ ವಾಹನ ಡಿಕ್ಕಿಯಾಗಿ, ಬಳ್ಳಾರಿ ಮೂಲದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟರೆ, 10 ಜನರಿಗೆ ಗಂಭೀರ ಗಾಯಗಳಾಗಿವೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿಯ ಹಂಸಮ್ಮ, ಸುಗುಣಮ್ಮ, ಸುನೀತ, ಇಮಾಂತ ರೆಡ್ಡಿ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊನಕ ಮೇಟ್ಲ ಮಂಡಲದ ಕೊತ್ತಪಲ್ಲಿ ಸಮೀಪದಲ್ಲಿ ಬೆಳಗಿನ ಜಾವ ಘಟನೆ ನಡೆದಿದೆ‌‌. ಶ್ರೀ ಶೈಲದಿಂದ ತಿರುಪತಿಗೆ ತೆರಳಬೇಕಾದರೆ ಘಟನೆ ಆಗಿದ್ದು, ಗಾಯಾಳುಗಳಿಗೆ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

 

Please follow and like us:
error