ಅರ್ಧ ಕೋಟಿಯ ಕಲಬೆರಕೆ ಗುಟ್ಕಾ ವಶಕ್ಕೆ : ಓರ್ವನ ಬಂಧನ

Koppal ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಗಿಣಿಗೇರಾ ಗ್ರಾಮದ ಬೈಪಾಸ್ ರಸ್ತೆಯ ಬಾಜು ಇರುವಂತಹ

ಉಮಾಮಹೇಶ್ವರ ಎಂಬುವರ ಕಾಂಪ್ಲೆಕ್ಸ್ ನಲ್ಲಿ ಸುಮಾರು ದಿವಸಗಳಿಂದ ಮಾನವ ಜೀವಕ್ಕೆ ಅಪಾಯಕರವಾಗುವ ನಿಷೇಧಿತ ವಿಷಕಾರಕ ಪದಾರ್ಥವಾದ ತಂಬಾಕು ಮತ್ತು ಪಾನ್ ಮಸಾಲಾ ಚೀಟುಗಳನ್ನು ಕಲಬೆರಕೆ ಮಾಡಿ ಅವುಗಳನ್ನು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಮಾನ್ಯ ಶ್ರೀಮತಿ ರೇಣುಕಾ ಸುಕುಮಾರ್ , ಜಿಲ್ಲಾ ಪೊಲೀಲ್ ಅಧೀಕ್ಷಕರು ಕೊಪ್ಪಳ , ಎಸ್ . ಎಸ್ . ಹುಲ್ಲೂರ , ಪೊಲೀಸ್ ಉಪಾಧೀಕ್ಷಕರು ಕೊಪ್ಪಳ ಉಪ ವಿಭಾಗ , ಹಾಗೂ ಭೀಮಣ್ಣ ಎಂ . ಸೋರಿ , ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ಗುರುರಾಜ ಕಟ್ಟಿಮನಿ , ಪಿ . ಎಸ್ . ಐ . ಕೊಪ್ಪಳ ಗ್ರಾಮೀಣ ಠಾಣೆ ರವರು ತಮ್ಮ ಸಿಬ್ಬಂದಿಯವರಾದ ಭರಮಪ್ಪ ಹೆಚ್ . ಸಿ . 203 , ಉದಯಾನಂದ , ಹೆಚ್ . ಸಿ . 19 , ಕೃಷ್ಣ ಹೆಚ್ ಸಿ – 57 ಬಸವರಾಜ್ ಪಿಸಿ 170 , ನಾಗರಾಜ ಪಿಸಿ 125 , ಶಿವಕುಮಾರ , ಪಿಸಿ 365 ಶ್ರೀ ಗಣೇಶ ಪಿಸಿ 21 ಹಾಗೂ ಜೀಪ ಚಾಲಕರಾದ ಮಹಾಂತೇಶ ಎ . ಪಿ . ಸಿ . 26 ಮತ್ತು ಚಂದ್ರಶೇಖರ ದಂಡಿನ ಎಪಿ . ಸಿ – 133 ಹಾಗೂ ಎಂ . ಎ . ಕಟ್ಟಿಮನಿ , ಜಿಲ್ಲಾ ಸರ್ವಕ್ಷಣಾಧಿಕಾರಿಗಳು , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರೊಂದಿಗೆ ಹೋಗಿ ನಿನ್ನೆ ದಿನಾಂಕ : 26 – 03 2019 ರಂದು ರಾತ್ರಿ 9 : 30 ಗಂಟೆಗೆ ಬಾತ್ಮಿ ಇದ್ದ ಸ್ಥಳದ ಸಮೀಪ ರೇಲ್ವೆ ಹಳಿಗಳ ಪಕ್ಕದಲ್ಲಿ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ನಜೀರ ಅಹ್ಮದ್ ತಂದೆ ಎಸ್ . ಕೆ . ನಾಸಿರುದ್ದೀನ್ ಪೊಲೀಸ್ ಪಾಟೀಲ್ 29 ವರ್ಷ ಸಾ : ಹೊಸ ಬಂಡಿಹರ್ಲಾಪೂರ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆಯಲ್ಲಿ ಅವನು ತಾನು ಮತ್ತು ಯುದಿಷ್ಟ‌ ಜೋಶಿ ಸಾ : ಜೋಧಪುರ , ರಾಜಸ್ಥಾನ , ಬಾಬುಖಾನ್ , ಜಿಲಾನಿ ಕಾರ್ಗೋ ಮೂವರ್ ಟ್ರಾನ್ಸಪೋರ್ಟ ಹೋಸಳ್ಳಿ , ಸಾ : ಪಚಪತ್ರಾ ರಾಜಸ್ಥಾನ ಮೂರು ಜನರು ಕೂಡಿ ಗಿಣಿಗೇರಾ ಗ್ರಾಮದಲ್ಲಿ ಉಮಾಮಹೇಶ್ವರ ಸಾ : ಮುನಿರಬಾದ ಎಂಬುವರ ಮಳಿಗೆಯಲ್ಲಿ ಸಂಗ್ರಹಿಸಿ ತಮ್ಮ ವೈಯುಕ್ತಿಕ ಲಾಭಕ್ಕಾಗಿ ಮಾರಾಟ ಮಾಡುತ್ತಿರುವದಾಗಿ ಅಲ್ಲದೇ ಅವು ವಿಷಕಾರಕ ಮತ್ತು ಜನರ ಆರೋಗ್ಯಕ್ಕೆ ಹಾನಿಕಾರಕ ಅಂಥಾ ತಿಳಿದಿದ್ದರು ಸಹ ಸಂಗ್ರಹ ಮಾಡಿ ಮಾರಾಟ ಮಾಡುತ್ತಿರುವದಾಗಿ ಹೇಳಿಕೆ ನೀಡಿದ್ದರಿಂದ ಸದರಿ ವಸ್ತುಗಳನ್ನು 1 ) FRESH KARE MAHA ROYALE 717 TOBACCO , ಎಂಬ ಹೆಸರಿನ 102 ಪ್ಲಾಸ್ಟಿಕ್ ಬ್ಯಾಗ ಅಂ . ಕಿ , 6 , 12 , 000 = 00 2 ] FRESH KARE XL ROYALE 717 TOBACCO , ಎಂಬ ಹೆಸರಿನ 35 ಪ್ಲಾಸ್ಟಿಕ್ ಬ್ಯಾಗ ಅಂ . ಕಿ . 84 , 700 = 00 3 ] HIRA PAN MASALA , ಎಂಬ ಹೆಸರಿನ 08 ರೂಪಾಯಿ ಮುಖ ಬೆಲೆಯ 93 ಬ್ಯಾಗ ಅಂ . ಕಿ . 16 , 36 , 800 = 00 4 ] HIRA PAN MASALA , ಎಂಬ ಹೆಸರಿನ 04 ರೂಪಾಯಿ ಮುಖ ಬೆಲೆಯ 223 ಬ್ಯಾಗ ಅಂ . ಕಿ , 25 , 76 , 000 = 00 ಹೀಗೆ ಒಟ್ಟು 50 , 09 , 500 = 00 ರೂ ಬೆಲೆ ಬಾಳುವ ನಿಷೇಧಿತ ತಂಬಾಕು ಮತ್ತು ಪಾನಮಸಾಲಾ ಪಾಕೇಟಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ . ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ : 68 / 2019 ಕಲಂ : 273 , 328 , ರೆಡ್ ಎಫ್ 34 ಐಪಿಸಿ ಅಡಿ ಪ್ರಕರಣದ ದಾಖಲಾಗಿದ್ದು ಇದೆ . ಪ್ರಕರಣದಲ್ಲಿ ಜಪ್ತಿ ಪಡಿಸಿಕೊಂಡ ಮಾಲು ಎಲ್ಲಿ ತಯಾರಿಸಲಾಗುತ್ತಿತ್ತು . ಅದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಎಲ್ಲಿಂದ ತರಿಸಲಾಗುತ್ತಿತ್ತು . ಎಲ್ಲೆಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿರುತ್ತದೆ . ಈ ಪ್ರಕರಣವನ್ನು ಬೇಧಿಸುವಲ್ಲಿ ಪ್ರಯತ್ನಿಸಿದ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಮಾನ್ಯ ಜಿಲ್ಲಾ ಹೊಲೀಸ್ ಅಧೀಕ್ಷಕರು ಕೊಪ್ಪಳ ರವರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

Please follow and like us:
error