ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕೊಪ್ಪಳ : ಬೆಂಕಿಯಿಂದ ಅರ್ಧಂಬರ್ಧ ಸುಟ್ಟ ಸ್ಥಿತಿಯಯಲ್ಲಿ ಯುವಕನೊರ್ವನ ಶವ ಪತ್ತೆಯಾಗಿದೆ. ಕುಕನೂರಿನ ಹೊರವಲಯದಲ್ಲಿ ಶವ ಪತ್ತೆಯಾಗಿದ್ದು ಬಳಗೇರಿ ಗ್ರಾಮದ ಮಹಮದ್‌ರಫಿ ಕಲ್ಲೂರು (22) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಬೈಕ್ ತೆಗೆದುಕೊಂಡು ಹೊರಗಡೆ ಬಂದಿದ್ದ ಯುವಕ ಕುಕನೂರಿನ ಕೊಪ್ಪಳ ರಸ್ತೆಯ ಹೊರವಲಯದ ಹೊಲವೊಂದರಲ್ಲಿ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ಧಾನೆ.ಶವದ ಸಮೀಲದಲ್ಲಿಯೇ ಬೈಕ್, ಪರ್ಸ್,

ಮೊಬೈಲ್, ಚಪ್ಪಲಿ ಬಿದ್ದಿದೆ.  ಇದು ಮೇಲ್ನೋಟಕ್ಕೆ ಕೊಲೆ ಎಂದೇ ಕಾಣುತ್ತಿದ್ದು  ಕೊಲೆಗೆ ನಿಜವಾದ ಕಾರಣ ಏನು ಮತ್ತು ಮಾಡಿದವರು ಯಾರು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error