ಅಂಗವಿಕಲ ಕಲ್ಯಾಣ ಇಲಾಖಾಧಿಕಾರಿಯ ಲಂಚಾವತಾರ audio ಈಗ ವೈರಲ್

Koppal Video Viral ವಿಶೇಷ ಚೇತನರ ತ್ರೀಚಕ್ರ ವಾಹನ ನೀಡಲು ಅಧಿಕಾರಿಗೆ ಲಂಚ ಕೊಡಬೇಕು …ಕೊಟ್ಟವರಿಗೆ ಮಾತ್ರ ತ್ರೀಚಕ್ರ ಕೊಡ್ತಾರೆ: ಕೊಡದೆ ಇದ್ರೆ ಸೂಕ್ರ ಫಲಾನುಭವಿಗಳಿಗೆ ವಾಹನ ಸಿಗುವುದಿಲ್ಲ

ಕೊಪ್ಪಳ:  ಅವರೆಲ್ಲ ಹುಟ್ಟುತ್ತಲೇ  ವಿಶೇಷ ಚೇತನರು ಅಂತನೇ ಭೂಮಿಗೆ ಬಂದವರು. ತಮ್ಮ ಜೀವನ ಕಟ್ಟಿಕೊಳ್ಳಲು ಹೆಣಗಾಡುವವರು. ಇವರು ಸಹ ಸಾಮಾನ್ಯ ಜನರಂತೆ ಓಡಾಡುವಂತಾಗಬೇಕು ಅಂತ ಸರ್ಕಾರ ತ್ರೀಚಕ್ರ ವಾಹನಗಳನ್ನು ನೀಡ್ತಿದೆ. ಆದ್ರೆ ಇಲ್ಲೊಬ್ಬ ಅಧಕಾರಿ ಬಕಪಕ್ಷಿಯಂತೆ ಕಾದು ಕುಳಿತು ಲಂಚಪೀಕುತ್ತಿದ್ದಾನೆ.

ಕನಕಗಿರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಇತ್ತ ಅಂಗವಿಕಲರ ಕಲ್ಯಾಣ ಅಧಕಾರಿ.  ಸರಕಾರ ಜನರಿಗೆ ಯೋಜನೆಗಳು ತಲುಪಲಿ  ಅಂತ  ಜಾರಿಮಾಡುತ್ತವೆ. ಆದ್ರೆ ಕೆಲವು ಅಧಿಕಾರಿಗಳು ಯೋಜನೆಗಳಲ್ಲಿಯೇ ಹನ ಮಾಡಿಕೊಳ್ಳಲು ಮುಂದಾಗುತ್ತಾರೆ. ಅಂತಹ  ಅಧಿಕಾರಿಯೊಬ್ಬರ ಬಂಡವಾಳ ಬಯಲಾಗಿದೆ. ಹೌದು. ಹುಟ್ಟತ್ತಲೆ ವಿಶೇಷ ಚೇತನರಾಗಿ  ಬಳಲಿ ಬೆಂಡಾಗಿರುವ ಅದೆಷ್ಟೋ ಬಡಪಾಯಿಗಳು ಜೀವನ ಕಟ್ಟಿಕೊಳ್ಳು ಹೆಣಗಾಡುತ್ತಿದ್ದಾರೆ. ಸರ್ಕಾರ  ಅವರ ಕೊರತೆ ನಿವಾರಿಸಲು ಏನೆಲ್ಲ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಆದ್ರೆ ಇಂತಹ ಲಂಚಬಾಕ ಅಧಿಕಾರಿಗಳ ಧನ ದಾಹದಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಸಿಗದೆ ವಂಚಿತರಾಗುತ್ತಿದ್ದಾರೆ.

ಕೊಪ್ಪಳ ಜಿಲ್ಲಾಡಳಿತ ಆವರಣದಲ್ಲಿ ವಿಕಲಚೇನರಿಗಾಗಿ ಬಂದು ತ್ರೀಚಕ್ರ ಬೈಕ್ ಗಳು ವಿತರಣೆಯಾಗದೆ ತುಕ್ಕು ಹಿಡಿಯುತ್ತಿವೆ. ಇತ್ತ ವಿಕಲಚೇತನ ಕಲ್ಯಾಣಾಧಿಕಾರಿ ಮಾತ್ರ  ಯಾರು ಹಣ ಕೊಡ್ತಾರೋ ಅಂತವರನ್ನ ಫಲಾನುಭವಿಯಾಗಿಸ್ತಾನೆ. ಅಷ್ಟು ಈತ ಪೀಕ್ತಾ ಇರೋದು ಬರೊಬ್ಬರಿ 5 ರಿಂದ 10 ಸಾವಿರ ರೂಪಾಯಿ. ಕಲ್ಯಾಣಧಿಕಾರಿ ಜಗದೀಶನ ಕರ್ಮಕಾಂಡದ  ಈಗ ಆಡಿಯೋ  ವೈರಲ್ ಆಗಿದ್ದು ಬಣ್ಣ ಬಯಲಾಗಿದೆ. ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೊ ಹಾಗೇ, ವಿಕಲಚೇತನರ ಸೌಲಭ್ಯದಲ್ಲಿಯೂ ಕೈ ಬಿಸಿ ಮಾಡಿಕೊಳ್ಳೋ ಈ ಭ್ರಷ್ಟ ಅಧಿಕಾರಿಯ ವಿರುದ್ಧ ವಿಕಲಚೇತನರು ಹಿಡಿಶಾಪ ಹಾಕುತ್ತಿದ್ದಾರೆ. ಇಂತವರನ್ನು ಬೇರೊಂದುಕಡೆ ವರ್ಗಾ ಮಾಡಿ ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುವ ಅಧಿಕಾರಿಯನ್ನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದ ಮೇಲೆ ಈ ತ್ರೀಚಕ್ರ ವಾಹನಗಳನ್ನು ಹಂಚಿಕೆ ಮಾಡಲಾಗುತ್ತದೆ ಅಂತ ಇದೇ ಅಧಿಕಾರಿ ಹೇಳಿದ್ದರು. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಶಂಕರ ಅಗಸ್ಟ್ 15 ರಂದು ಬಂದಿದ್ದರು. ಆದ್ರ ವಾಹನಗಳು ಮಾತ್ರ ಹಂಚಿಕೆಯಾಗಿಲ್ಲ.

ಈಗಲಾದರೂ ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುನೀಲ್ ಕುಮಾರ್ ಅವರು ಇದನ್ನು ಪರಿಶೀಲಿಸಿ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರಾ?  ನೋಡಬೇಕಾಗಿದೆ.

Please follow and like us:
error