19 ವರ್ಷದ ಎಸ್‌ಬಿಐ ಉದ್ಯೋಗಿಯ  ಕತ್ತು ಹಿಸುಕಿ ಬೆಂಕಿ ಹಚ್ಚಿ ಕೊಲೆ ಮಾಡಿದ ಮಾಜಿ ಗೆಳೆಯ

ಹೈದರಾಬಾದ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ಮಾಜಿ ಗೆಳೆಯ ಹತ್ಯೆ ಮಾಡಿದ್ದು ನಂತರ ಆಕೆಯ ದೇಹವನ್ನು ಸುಟ್ಟು ಹಾಕಿದ ಘಟನೆ , ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ  ನಡೆದಿದೆ  ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಬಂಧಿಸಲ್ಪಟ್ಟ ಆರೋಪಿ, ಇನ್ನೊಬ್ಬ ಪುರುಷನೊಂದಿಗಿನ ಯುವತಿಯ ಸಂಬಂಧದ ಬಗ್ಗೆ ಆಕ್ರೊಶಗೊಂಡು ಈ ಕೃತ್ಯ ಮಾಡಿದ್ದಾನೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಸ್ನೇಹಲತಾ ಮೇಸನ್ ಆಗಿ ಕೆಲಸ ಮಾಡುತ್ತಿದ್ದ ಗೂಟಿ ರಾಜೇಶ್ ಎಂಬಾತನೊಂದಿಗೆ ಡೇಟಿಂಗ್ ಮಾಡಿದ್ದರು, ಆದರೆ ಬ್ಯಾಂಕಿನಲ್ಲಿ ಗುತ್ತಿಗೆ ಕೆಲಸ ಪಡೆದ ನಂತರ ದೂರವಾಗಿದ್ದರು ಎಂದು ವರದಿಯಾಗಿದೆ. ನಂತರ ಅವಳು ಕಾಲೇಜಿನಲ್ಲಿ ತನ್ನ ಸಹಪಾಠಿಯೊಂದಿಗೆ ಹತ್ತಿರವಾದಳು ಇದು ರಾಜೇಶ್ಗೆ ಕೋಪಕ್ಕೆ ಕಾರಣವಾಗಿತ್ತು ಅವಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದ ರಾಜೇಶ್. ಕಳೆದ ಒಂದು ವರ್ಷದಲ್ಲಿ ಸ್ನೇಹಲತಾ ಮತ್ತು ರಾಜೇಶ್ 1,618 ಬಾರಿ ಮಾತನಾಡಿದ್ದಾರೆ ಎಂದು ಕರೆ ದಾಖಲೆಗಳು ಬಹಿರಂಗಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ರಾಜೇಶ್ ಸ್ನೇಹಲತಾಳನ್ನು ಮಾತುಕತೆಗೆ ಕರೆರು ತನ್ನ ಬೈಕ್‌ನಲ್ಲಿ ಕರೆದೊಯ್ದು ಕತ್ತು ಹಿಸುಕಿ  ಅವಳ ಅಪೇರ್ ಬಗ್ಗೆ ಜಗಳ ಮಾಡಿದ್ಧಾನೆ .

“ಅನಂತಪುರಮುಗೆ ಹೋಗುವ ಮಾರ್ಗದಲ್ಲಿ, ಗೂಟಿ ರಾಜೇಶ್ (ಆರೋಪಿ) ಬದನಪಲ್ಲಿಯ ಮೈದಾನದ ಬಳಿ ಬೈಕನ್ನು ನಿಲ್ಲಿಸಿ (ಅವಳ ಸಹಪಾಠಿ) ಪ್ರವೀಣ್ ಅವರೊಂದಿಗಿನ ಅನ್ಯೋನ್ಯತೆಯ ಬಗ್ಗೆ ಅವಳನ್ನು ಪ್ರಶ್ನಿಸಲು ಪ್ರಾರಂಭಿಸಿದನು. ಇದು ವಾದಕ್ಕೆ ಕಾರಣವಾಯಿತು. , ಅವನು ಅವಳ ಬ್ಯಾಂಕ್ ಪೇಪರ್‌ಗಳನ್ನು ಸುಟ್ಟು ಅವಳ ದೇಹದ ಮೇಲೆ ಇಟ್ಟನು, ಇದರಿಂದಾಗಿ ಆಕೆಯ ದೇಹವು ಭಾಗಶಃ ಸುಟ್ಟುಹೋಯಿತು. ಯಾವುದೇ ಲೈಂಗಿಕ ದೌರ್ಜನ್ಯ ಅಥವಾ ಸಂಭೋಗ ನಡೆದಿಲ್ಲ “ಎಂದು ಹಿರಿಯ ಪೊಲೀಸ್ ಅಧಿಕಾರಿ ಭೂಸರಪು ಸತ್ಯ ಯೇಸು ಬಾಬು ಹೇಳಿದ್ದಾರೆ.

Please follow and like us:
error