ಸೈಬರ್ ಅಪರಾಧಗಳ ಬಗ್ಗೆ ಜಾಗೃತಿವಹಿಸಿ : ವಿಕಾಸ್ ಕಿಶೋರ್ ಸುರಳ್ಕರ್

ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಷಯಗಳ ಕುರಿತು ತರಬೇತಿ ಕಾರ್ಯಾಗಾರ

ಕೊಪ್ಪಳ,  : ತಾಂತ್ರಿಕತೆಯ ಬೆಳವಣಿಗೆಯಿಂದ ಜಗತ್ತು ವೇಗವಾಗಿ ಸಾಗುತ್ತಿದ್ದು,  ಮಾಹಿತಿ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಅಪರಾಧಗಳು ಹೆಚ್ಚು ನಡೆಯುತ್ತಲಿವೆ ಹಾಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ಸೈಬರ್ ಅಪರಾಧದ ಕುರಿತು ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಹೇಳಿದರು.
ಕೇಂದ್ರ ಸರ್ಕಾರದ ಎನ್.ಇ.ಜಿ.ಡಿ. ಸಾಮಾರ್ಥ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು, ಇ-ಆಡಳಿತ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಷಯಗಳ ಕುರಿತು ತಾಲ್ಲೂಕ ಪಂಚಾಯತಿ ಆವರಣದಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ಗುರುವಾರದಂದು (ಫೆ.25) ಹಮ್ಮಿಕೊಂಡಿದ್ದ ಜಿಲ್ಲೆಯ ಗ್ರೂಪ್-ಎ ಅಧಿಕಾರಿಗಳ ಮುಖಾಮುಖಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೈಬರ್ ಕ್ರೆöÊಮ್ ಭದ್ರತೆ ಮತ್ತು ಇಂದಿನ ಇ-ಆಡಳಿತದ ಪ್ರಾಮುಖ್ಯತೆ ಮಹತ್ವದ್ದು.  ಸರ್ಕಾರಿ ಅಧಿಕಾರಿಗಳು ಇ-ಆಡಳಿತವನ್ನು ಸಮರ್ಪಕ ರೀತಿಯಲ್ಲಿ ಬಳಸುವ ನಿಟ್ಟಿನಲ್ಲಿ ತಮ್ಮ ಇಲಾಖೆಯ ಕೆಲಸಗಳನ್ನು ತಂತ್ರಜ್ಞಾನ ಬಳಸಿಕೊಂಡು ಶೀಘ್ರವಾಗಿ ಮಾಡುವುದು ಹೇಗೆ ಎಂಬುದನ್ನು ಕೂಡ ತಿಳಿದುಕೊಳ್ಳುವುದರ ಜೊತೆಗೆ  ಅಧಿಕಾರಿಗಳು ಕಚೇರಿಯ ಗಣಕಯಂತ್ರ ಮತ್ತು ಮೋಬೈಲ್‌ಗಳಲ್ಲಿ ಅಂತರ್ಜಾಲ ಬಳಕೆಯ ಉಪಯೋಗ ಮತ್ತು ಆಗಬಹುದಾದ ಅನಾನುಕೂಲತೆಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ಸೈಬರ್ ಮತ್ತು ಕ್ರೆöÊಮ್ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಅವರು ಮಾತನಾಡಿ, ತಂತ್ರಾAಶಗಳನ್ನು ಬಳಸುವವರು ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದಿರಬೇಕು. ತಾಂತ್ರಿಕ ಲಿಂಕ್, ಒಟಿಪಿ, ಯುಪಿಐ ಹಾಗೂ ಯಾವುದೇ ರೀತಿಯ ಸಂದೇಶಗಳನ್ನು ಪರಿಶೀಲಿಸದೇ ಅವುಗಳಿಗೆ ಸಮ್ಮತಿ ನೀಡಬಾರದು ಇದರಿಂದ ನಿಮಗೆ ತೊಂದರೆಯಾಗಬಹುದು.  ಎಂದು ಹೇಳಿದರು.
ಬ್ಯಾಂಕಿAಗ್, ಆನ್‌ಲೈನ್ ವ್ಯವಹಾರ ವಿವಿಧ ವಿಷಯಗಳ ಬಗ್ಗೆ ಎಚ್ಚರವಿರಬೇಕು ಮತ್ತು ಅಪರಿಚಿತ ಮೊಬೈಲ್ ನಂಬರ್‌ಗಳಿAದ ಕರೆಗಳು ಬಂದು ಉದ್ಯೋಗ, ಲಾಟರಿ ನೀಡುವ ಉಡಾಫೆ ಭರವಸೆ ನೀಡಿ ನಿಮ್ಮನ್ನು ವಂಚಿಸುವ ಫ್ರಾಡ್‌ಗಳು ಇರುತ್ತಾರೆ ಅಂತಹ ವಿಷಯಗಳಿಗೆ ಗಮನ ನೀಡಬಾರದು. ಇನ್ನು ನಿಮ್ಮ ವಾಟ್ಸಾö್ಯಪ್, ಫೇಸ್‌ಬುಕ್, ಇನ್ಸಾ÷್ಟಗ್ರಾಂ ಗಳಂತಹ ತಂತ್ರಾAಶಗಳು, ಕ್ರೆಡಿಟ್-ಡೆಬಿಟ್ ಕಾರ್ಡ್ಗಳ ಪಾಸ್‌ವರ್ಡ್ಗಳನ್ನು ಯಾರ ಬಳಿಯು ಹಂಚಿಕೊಳ್ಳಬಾರದು ಇದರಿಂದ ವಂಚಕರು ಹ್ಯಾಕಿಂಗ್ ಮಾಡುವ ಸಂಭವಗಳು ಎದುರಾಗುತ್ತವೆ ಹಾಗಾಗಿ ಇವುಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸೈಬರ್ ಸೆಕ್ಯುರಿಟಿ ಕುರಿತು ವಿವರಿಸಿದರು.
ಎನ್.ಐ.ಸಿ ಯ ಹೆಚ್ಚುವರಿ ಜಿಲ್ಲಾ ಮಾಹಿತಿ ಅಧಿಕಾರಿ ಡಬ್ಲೂö್ಯ. ಬಸವರಾಜ ಅವರು ಇ-ಆಡಳಿತದ ಕುರಿತು ಮಾತನಾಡಿ, ಇ-ಆಡಳಿತವೆಂದರೆ ಕಂಪ್ಯೂಟರ್ ಬಳಕೆಯ ಪ್ರಾರಂಭದಿAದ ಕೊನೆಯವರೆಗೆ ಒದಗಿಸುವ ಸೇವೆಯಾಗಿದ್ದು, ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆಯಾಗಿದೆ ಎಂದರು.
ಸರ್ಕಾರದಿAದ ಸರ್ಕಾರಕ್ಕೆ, ನಾಗರೀಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲಾ ವರ್ಗದವರಿಗೂ ಸರ್ಕಾರದ ಇ-ಆಡಳಿತ ಸೇವೆ ಲಭಿಸುತ್ತಿದೆ. ಇ-ಆಡಳಿತ ಸೇವೆಯಿಂದ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಪದವಿ ಹಾಗೂ ಸ್ನಾತಕ ಪದವಿಗಳ ಅಂಕಪಟ್ಟಿಗಳು, ಸಾರ್ವಜನಿಕರಿಗೆ ಅಗತ್ಯವಿರುವ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿಜಿಟಲ್ ಪಾವತಿ, ಜಿ.ಎಸ್.ಟಿ., ಜಾತಿ-ಆದಾಯ ಪ್ರಮಾಣ ಪತ್ರ ಒಳಗೊಂಡAತೆ ಅನೇಕ ದಾಖಲೆಗಳನ್ನು ಇ-ಆಡಳಿತ ಸೇವೆಯಿಂದ ನಾವು ಪಡೆದುಕೊಳ್ಳಬಹುದು. ಮತ್ತು ಅಧಿಕಾರಿಗಳು ತಂತ್ರಜ್ಞಾನ ಬಳಕೆಯನ್ನು ಸೂಕ್ತವಾಗಿ ಬಳಸಬೇಕು ಎಂದು ಇ-ಆಡಳಿತ ವಿಷಯದ ಕುರಿತು ವಿವರವಾಗಿ ಹೇಳಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎಂ. ಗುರುರಾಜ ಸೇರಿದಂತೆ ವಿವಿಧ ಇಲಾಖೆಯ ಗ್ರೂಪ್-ಎ  ಅಧಿಕಾರಿಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

Please follow and like us:
error