ಶಿವಪುರದಲ್ಲಿ ಬಾಲ್ಯವಿವಾಹ : ಪ್ರಕರಣ ದಾಖಲು


ಕೊಪ್ಪಳ,: ಕೊಪ್ಪಳ ತಾಲ್ಲೂಕಿನ ಶಿವಪುರದಲ್ಲಿ ನಡೆದ ಬಾಲ್ಯವಿವಾಹಕ್ಕೆ ಸಂಬAಧಿಸಿದAತೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಕೊಪ್ಪಳ ಶಿಶು ಅಭಿವೃದ್ಧಿ ಕೇಂದ್ರದಿAದ ಪ್ರಕರಣ ದಾಖಲಿಸಲಾಗಿದೆ.
ಬಾಲ್ಯವಿವಾಹ ಅನಿಷ್ಟ ಪದ್ಧತಿಯಾಗಿದ್ದು, ಬಾಲ್ಯವಿವಾಹಗಳನ್ನು ತಡೆಯಲು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವಿರತವಾಗಿ ಶ್ರಮವಹಿಸುತ್ತಿದೆ. ಅದರ ಭಾಗವಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಮೇಲ್ವಿಚಾರಕಿಯರು ಗುರುವಾರದಂದು (ನ.26) ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಶಿವಪುರದಲ್ಲಿ ನಡೆದ ಬಾಲ್ಯವಿವಾಹ ಪ್ರಕರಣಕ್ಕೆ ಸಂಬAಧಿಸಿದAತೆ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ತಿದ್ದುಪಡಿ ಕಾಯ್ದೆ-2016 ರನ್ವಯ ಪ್ರಕರಣ ದಾಖಲಿಸಿ ಈ ಮೂಲಕ ಬಾಲ್ಯವಿವಾಹಕ್ಕೆ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ತಿಳಿಸಿದ್ದಾರೆ.

Please follow and like us:
error