ಲಾರಿ ಪಲ್ಟಿ ಬೈಕ್ ಸವಾರ ಸಾವು

ಕೊಪ್ಪಳ : ಪಲ್ಟಿಯಾದ ಲಾರಿಯ ಕೆಳಗೆ ಬೈಕ್ ಸವಾರ ಸಿಲುಕಿಕೊಂಡು ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಬಳಿ ಲಾರಿ ಪಲ್ಟಿಯಾಗಿದೆ. ಮೃತನನ್ನ ಮಲ್ಲಪ್ಪ ಎಂದು

ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ೧೩ ದನದಹಳ್ಳ ಸೇತುವೆಯಲ್ಲಿ ನಡೆದ ಘಟನೆ ನಡೆದಿದೆ. ಕೆರೆಹಳ್ಳಿ ಗ್ರಾಮದಲ್ಲಿ ಏಕಲವ್ಯ ಶಾಲೆಯ ಶಿಕ್ಷಕನಾಗಿದ್ದ ಮಲ್ಲಪ್ಪ ಮನೆಯಲ್ಲಿ ಗಣೇಶ ಪೂಜೆ ಮುಗಿಸಿಕೊಂಡು ಹಿಟ್ನಾಳದತ್ತ ಬೈಕ್ ಮೇಲೆ ಬರುತ್ತಿದ್ದಾಗ ಒಮ್ಮೆಲೆ ಲಾರಿ ಪಲ್ಟಿಯಾಗಿ ಬೈಕ್ ಸವಾರನ ಮೇಲೆ ಬಿದ್ದಿದೆ. ಸ್ಥಳಕ್ಕೆ ಸ್ಥಳಕ್ಕೆ ಸಿಪಿಐ ರವಿ ಉಕ್ಕುಂದ , ಮುನಿರಾಬಾದ್ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Please follow and like us:
error