ಲಂಚ ಪ್ರಕರಣ : ಅಪರಾಧಿಗೆ ದಂಡ ಸಹಿತ ಕಾರಾಗೃಹ ಶಿಕ್ಷೆ ಪ್ರಕಟ

ಕೊಪ್ಪಳ, : ಗದಗ ಭೂಸೇನಾ ನಿಗಮದ ಜೆ.ಇ ಆಗಿದ್ದ ಗಂಗಾವತಿ ನಿವಾಸಿ ಎಸ್.ಟಿ ಈರಪ್ಪ(59 ವರ್ಷ) ಎಂಬುವವರ ವಿರುದ್ಧ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಲಂಚ ಪ್ರತಿಬಂಧಕ ಕಾಯ್ದೆ 1988 ರ ಕಲಂ 13(1)(ಇ) ಸಹಿತ 13(2) ರನ್ವಯ 4 ವರ್ಷ 2 ತಿಂಗಳುಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ. 1,60,000 ಗಳ ದಂಡ ವಿಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶರಾದ ಎಲ್.ವಿಜಯಲಕ್ಷಿö್ಮದೇವಿ ಅವರು ಅ.29 ರಂದು ತೀರ್ಪು ನೀಡಿದ್ದಾರೆ.
2001 ರಲ್ಲಿ ಗದಗನ ಭೂಸೇನಾ ನಿಗಮದಲ್ಲಿ ಜೆ.ಇ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನ್ಯಾಯ ಸಮ್ಮತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದ ಕುರಿತು ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ವಿರುದ್ಧ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯನ್ವಯ್ಲ ವಿಚಾರಣೆ ನಂತರ ಆರೋಪಿತನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಒಂದು ವೇಳೆ ಅಪರಾಧಿಯು ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿ ಆರು ತಿಂಗಳುಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
ವಿಶೇಷ ಸರ್ಕಾರಿ ಅಭಿಯೋಜಕರಾದ ಎಚ್.ಎಸ್.ಹಿರೇಮಠ ಅವರು ಪ್ರಕರಣದಲ್ಲಿ ಲೋಕಾಯುಕ್ತದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ಆರಕ್ಷಕ ನಿರೀಕ್ಷಕರುಗಳಾದ ಆರ್.ಕೆ.ಪಾಟೀಲ್, ಎಲ್.ವೈ.ಶಿರಕೋಳ ಮತ್ತು ಸತ್ಯಣ್ಣರೆಡ್ಡಿ ಅವರು ನಡೆಸಿದ್ದರು ಎಂದು ಕೊಪ್ಪಳ ಲೋಕಾಯುಕ್ತದ ಆರಕ್ಷಕ ಉಪಾಧೀಕ್ಷಕರು  ತಿಳಿಸಿದ್ದಾರೆ.

Please follow and like us:
error