ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ನಗರದ ಮಿಟ್ಟಿಕೇರಿ ನಿವಾಸಿ ಶಮ್ಮಾಫರ್ವಿನ್ (20) ಎಂಬ ಯುವತಿ ಕಳೆದ ನವೆಂಬರ್. 27 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶಮ್ಮಾಫರ್ವಿನ್ (20) ಎಂಬ ಯುವತಿ ನವೆಂಬರ್. 27 ರಂದು ಬೆಳಿಗ್ಗೆ 11-40 ಸುಮಾರಿಗೆ ಹೋಲಿಗೆ ಕ್ಲಾಸ್‌ಗೆ ಹೋಗುತ್ತೇನೆ ಎಂದು ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಕುಟುಂಬಸ್ಥರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ ವಿವರ;
ಶಮ್ಮಾಫರ್ವಿನ್ ತಂದೆ ವಲಿಪಾಶಾ ವರ್ದಿ, 20 ವರ್ಷ, 5.2 ಫೀಟ್ ಎತ್ತರ, ಗೋದಿ ಬಣ್ಣ, ಸಾದಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಚೂಡಿದಾರ ಮತ್ತು ನೀಲಿ ಬಣ್ಣದ ಪ್ಯಾಂಟ್ ಮತ್ತು ವೇಲು ಧರಿಸಿದ್ದಳು. ಈ ಯುವತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಮಹಿಳಾ ಪೋಲಿಸ್ ಠಾಣೆ ದೂ.ಸಂ. 08539-221233, ಎಸ್.ಪಿ ಕೊಪ್ಪಳ ರವರ ದೂ.ಸಂ. 9480803701, ಪಿ.ಐ ಮಹಿಳಾ ಪೋಲಿಸ್ ಠಾಣೆ ಸಂ. 9986074506 ಕ್ಕೆ ಸಂರ್ಪಕಿಸಿ ಮಾಹಿತಿ ನೀಡಬಹುದು .
Please follow and like us:
error