ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮುಂಬೈನಲ್ಲಿ ಬಂಧನ

Mumbai : ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ ಮುಂಬೈ ಕ್ಲಬ್ ಮೇಲೆ ದಾಳಿ ನಡೆಸಿರುವ ಮುಂಬೈ ಪೊಲೀಸರು ಮಾಜಿ ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಸಹಿತ 34 ಜನರನ್ನು ಬಂಧಿಸಿದ್ದಾರೆ. ಕ್ರಿಕೆಟಿಗ ರೈನಾರನ್ನು ನಂತರ ಜಾಮೀನಿನ ಮೇಲೆ  ಬಿಡುಗಡೆ ಮಾಡಲಾಗಿದೆ.

 ಕ್ಲಬ್ನ್ನು ಅನುಮತಿ ನೀಡಿದ ಸಮಯಕ್ಕಿಂತ ಹೆಚ್ಚು ಕಾಲ ತೆರೆದಿರುವುದಕ್ಕೆ ಹಾಗೂ ಕೋವಿಡ್ ಮಾನದಂಡಗಳನ್ನು ಪಾಲಿಸದೇ ಇರುವುದಕ್ಕೆ ಬಂಧನ ನಡೆದಿದೆ. ಬಂಧಿತರಲ್ಲಿ ಗಾಯಕ ಗುರು ರಾಂಧವ ಅವರಿದ್ದಾರೆ. ಏಳು ಮಂದಿ ಹೊಟೇಲ್ ಸಿಬ್ಬಂದಿ ಸಹಿತ ಒಟ್ಟು 34 ಜನರನ್ನು ಬಂಧಿಸಲಾಗಿದೆ .

 

ರೈನಾ ಜನವರಿ 10ರಂದು ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20ಟ್ರೋಫಿಯಲ್ಲಿ ತವರು ರಾಜ್ಯ ಉತ್ತರಪ್ರದೇಶವನ್ನು ಪ್ರತಿನಿಧಿಸಲಿದ್ದಾರೆ. ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯ ಶಿಬಿರದಲ್ಲಿ ರೈನಾ ಭಾಗವಹಿಸಿದ್ದಾರೆ.

ವರ್ಷದ ಆಗಸ್ಟ್ನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ರೈನಾ ಅವರು ದೇಶೀಯ ಕ್ರಿಕೆಟ್ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು. ಕಮಲಾ ಕ್ಲಬ್ನಲ್ಲಿ ಉತ್ತರಪ್ರದೇಶ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದರು.

Please follow and like us:
error