ಮಂಗಳೂರಲ್ಲಿ ಮತ್ತೆ ಕಾಣಿಸಿಕೊಂಡಿರುವ ಗೋಡೆ ವಿವಾದಾತ್ಮಕ ಬರಹ

ಮಂಗಳೂರು: ನಗರದ ಮತ್ತೊಂದು ಕಡೆ ಗೋಡೆ ಬರಹವೊಂದು ಕಾಣಿಸಿಕೊಂಡಿರುವ ಮತ್ತಷ್ಟು ಆಂತಕಕ್ಕೆ ಕಾರಣವಾಗಿದೆ.

ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಈ ಬರಹ ಕಂಡುಬಂದಿದೆ.

ಕೋರ್ಟ್ ಆವರಣದ ಜನರೇಟರ್ ಗೋಡೆಯ ಮೇಲೆ “Gustak e rasool ek hi saza tan say juda” ಎಂದು ಬರೆಯಲಾಗಿದೆ. ಈ ಬಗ್ಗೆ ಬಂದರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಬಿಜೈನ ಅಪಾರ್ಟ್‌ಮೆಂಟ್ ವೊಂದರಲ್ಲಿ ಉಗ್ರರ‌ ಪರ ಗೋಡೆ ಬರಹ ಕಾಣಿಸಿಕೊಂಡಿತ್ತು. ಪೊಲೀಸರು ಕಾರ್ಯಾಚರಣೆಗೆ ಇಳಿದ ಬೆನ್ನಲ್ಲೇ ಮತ್ತೊಂದು ಕಡೆ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.

Please follow and like us:
error