ಬಸ್-ಬೈಕ್ ಡಿಕ್ಕಿ; ಕೊಪ್ಪಳದ ಕ್ರಿಕೆಟ್ ಆಟಗಾರ ಸಾವು

ಕೊಪ್ಪಳ: ಕೊಪ್ಪಳ ಸಮೀಪದ ಚುಕ್ಕನಕಲ್ ಗ್ರಾಮದ ಬಳಿ  ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಬೈಕ್ ಸವಾರನನ್ನು ಕೊಪ್ಪಳದ ಶ್ರೀಶೈಲನಗರದ ದಾದಾಪೀರ (30) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಮತ್ತೊಬ್ಬ ಯುವಕ ಕೊಪ್ಪಳದ ಸುನೀಲ್‌ (26) ಗಂಭೀರವಾಗಿ ಗಾಯಗೊಂಡಿದ್ದು, ಕೆ.ಎಸ್.ಆಸ್ಪತ್ರೆಗೆ ದಾಖಲಿಸಲಾಗಿದೆ. ದಾದಾಪೀರ ಕೊಪ್ಪಳದಲ್ಲಿ ಕ್ರಿಕೆಟ್ ಆಟಗಾರನಾಗಿ ಹೆಸರು ಮಾಡಿದ್ದರು.  ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error