ಪಾಗಲ್ ಪ್ರೇಮಿಯ ಹುಚ್ಚಾಟ ತಲ್ವಾರ್ ನಿಂದ ಯುವತಿಯ ಮೇಲೆ ಹಲ್ಲೆ

ಹುಬ್ಬಳ್ಳಿ :    ಯುವತಿಯ ಮೇಲೆ ಪಾಗಲ್ ಪ್ರೇಮಿಯೊಬ್ಬ ತಲ್ವಾರ್ ನಿಂದ್ ಹೊಡೆದ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಘಟನೆ ನಡೆದಿದ್ದು  ಗಂಭೀರವಾಗಿ ಗಾಯಗೊಂಡಿರುವ ಯುವತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಾಗಲ್ ಪ್ರೇಮಿಯ ಹುಚ್ಚಾಟ ಯುವತಿಗೆ ತಲ್ವಾರ್ ನಿಂದ ಹಲ್ಲೆ.. ವಿಡಿಯೋ

 

ಕುಂದಗೋಳ ತಾಲೂಕಿನ ಕುಂಕುರ ಗ್ರಾಮದ  ಅಟೋಚಾಲಕ ಇಮ್ತಿಯಾಜ್ ದಾಳಿ ಮಾಡಿ ಯುವಕ. ದೇಶಪಾಂಡೆ ನಗರದ ನಿವಾಸಿ ಯುವತಿ ಶೈನಾ ಭಾನು ಹಲ್ಲೆಗೊಳಗಾದವಳು. ಬಂಗಾರದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶೈನಾಬಾನು ಮತ್ತು ಇಮ್ತಿಯಾಜ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  ಶೈನಾಬಾನು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಮಾಸ್ಕ ಹಾಕಿಕೊಂಡು ಬಂದ ಇಮ್ತಿಯಾಜ್  ತಲ್ವಾರನಿಂದ ಹಲವು ಬಾರಿ ದಾಳಿ ಮಾಡಿದ್ದಾನೆ. ಘಟನೆಗೆ ಕಾರಣ ತಿಳಿದುಬಂದಿಲ್ಲ ಯವತಿಯ ಕತ್ತಿಗೆ ಮೂರು ಬಾರಿ ಹೊಡೆದಿರುವದರಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಸ‍್ಥಳೀಯರು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳದಲ್ಲಿದ್ದ ಮಂಜುನಾಥ್ ಎನ್ನುವವರು ಇಮ್ತಿಯಾಜ್ ನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.  ಆರೋಪಿ ಸಧ್ಯ ಉಪನಗರ ಠಾಣೆಯಲ್ಲಿ ಪೋಲಿಸರ ವಶದಲ್ಲಿದ್ದಾನೆ.

Please follow and like us:
error