ಪಡಿತರ ಅಕ್ಕಿ ಅಕ್ರಮ ಮಾರಾಟ,ಸಂಗ್ರಹ ದಂಧೆ : ಉಮೇಶ ಸಿಂಗನಾಳ,ಬಾಷಾ ಮನಿಯಾರ್ ಬಂಧನ

 

ಗಂಗಾವತಿ :  ಪಡಿತರ ಅಕ್ಕಿ ಅಕ್ರಮ ಮಾರಾಟ,ಸಂಗ್ರಹ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಜನೇವರಿ ತಿಂಗಳಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಟಿ.ಶ್ರೀಧರ್ ನೇತೃತ್ವದ ತಂಡದಿಂದ  ಗಂಗಾವತಿಯಲ್ಲಿ  ನಡೆದ ದಾಳಿಯ ಸಂದರ್ಭದಲ್ಲಿ ಕೋಟ್ಯಾಂತರ ಮೌಲ್ಯದ ಪಡಿತರ ಅಕ್ಕಿ ಪತ್ತೆಯಾಗಿತ್ತು. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಪ್ರಕರಣದಲ್ಲಿ ಪ್ರಭಾವಿ ಮುಖಂಡರ ಮಿಲ್ ಗಳ ಮೇಲೆ ದಾಳಿ ಮಾಡಿ  ಸೀಜ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿಯ ನಗರಸಭಾ ಸದಸ್ಯ ಉಮೇಶ ಸಿಂಗನಾಳ , ಬಾಷಾ ಮನಿಯಾರ್ರನ್ನು ಪೋಲಿಸರು ಬಂದಿಸಿದ್ದಾರೆ. ಉಳಿದ ಆರೋಪಿಗಳು ದೇಶದ ವಿವಿಧ ನಗರಗಳಲ್ಲಿ ನಾಗಪುರ, ದಾವಣಗೆರೆ ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡಿದ್ದಾರೆ. ಶೀಘ್ರವೇ ಬಂಧಿಸಲಾಗುವುದು ಎಂದು ಪೋಲಿಸ್ ಅಧಿಕಾರಿಗಳು  ತಿಳಿಸಿದ್ದಾರೆ.

 

Please follow and like us:
error