ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಗಲ್ಲು

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ನೇಣು ಗಂಬಕ್ಕೆ ಏರಿಸಲು ಸಕಲ ಸಿದ್ಧತೆಗಳು ನಡೆದಿದ್ದು, ಬುಧವಾರ ತಿಹಾರ್ ಜೈಲಿನ ಅಧಿಕಾರಿಗಳ ನೆರವಿನೊಂದಿಗೆ ಹ್ಯಾಂಗ್‌ಮನ್ ಪವನ್ ಅಣಕು ಮರಣದಂಡನೆಯನ್ನು ನೆರವೇರಿಸಿದರು.

ಬುಧವಾರ ಸಂಜೆ ಜೈಲಧಿಕಾರಿಗಳು ಮತ್ತು ಜೈಲು ವೈದ್ಯರ ನೆರವಿನೊಂದಿಗೆ ಹ್ಯಾಂಗ್‌ಮನ್, ನೇಣುಗಂಬಕ್ಕೇರಿಸುವ ಅಣಕು ಕಾರ್ಯಾಚರಣೆ ಕೈಗೊಂಡರು. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಕೋರ್ಟ್ ನಿರ್ದಿಷ್ಟಪಡಿಸಿದಂತೆ ಮರಣದಂಡನೆ ಜಾರಿಗೆ ಸಕಲ ಸಿದ್ಧತೆಗಳಾಗಿವೆ ಎಂದು ದೆಹಲಿ ಕಾರಾಗೃಹ ವಿಭಾಗದ ಮಹಾನಿರ್ದೇಶಕ ಸಂದೀಪ್ ಗೋಯಲ್ ಹೇಳಿದ್ದಾರೆ.

ಮರಣ ದಂಡನೆ ಜಾರಿಯನ್ನು ಮುಂದೂಡುವಂತೆ ಹಲವು ಮನವಿಗಳನ್ನು ಆರೋಪಿಗಳು ಮಾಡಿದ್ದು, ಅವುಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವಲ್ಲಿ ಜೈಲು ಅಧಿಕಾರಿಗಳು ನಿರತರಾಗಿದ್ದಾರೆ. ಈ ಮಧ್ಯೆ ಒಬ್ಬ ಆರೋಪಿಯ ವಕೀಲರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡನೇ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಆರೋಪಿ ಅಕ್ಷಯ್ ಭೇಟಿಗಾಗಿ ಆತನ ಕುಟುಂಬ ಗುರುವಾರ ದೆಹಲಿಗೆ ಬರಲಿದೆ ಎಂದು ವಕೀಲರು ಹೇಳಿದ್ದಾರೆ.

ಆರೋಪಿಗಳು ಸ್ವಯಂ ಹಾನಿ ಮಾಡಿಕೊಳ್ಳದಂತೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಕಣ್ಗಾವಲು ವ್ಯವಸ್ಥೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Please follow and like us:
error