ಡೆತ್ ನೋಟ್ ಬರೆದಿಟ್ಟು ಅರಣ್ಯ ಇಲಾಖೆ ದಿನಗೂಲಿ ನೌಕರ ಆತ್ಮಹತ್ಯೆ

 

ಗಂಗಾವತಿ : ಡೆತ್ ನೋಟ್ ಬರೆದಿಟ್ಟು ಅರಣ್ಯ ಇಲಾಖೆ ದಿನಗೂಲಿ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕು ಗಂಗಾವತಿ ಆರ್ ಎಫ್ ಒ ಕಚೇರಿಯಲ್ಲಿ ನಡೆದಿದೆ.ಟಿ.ಮಲ್ಲಿಕಾರ್ಜುನ ಆತ್ಮಹತ್ಯೆ ಮಾಡಿಕೊಂಡಿರೋ ನೌಕರ.ನಿವೃತ್ತಿ ಸನಿಯದಲ್ಲಿದ್ದ ಮಲ್ಲಿಕಾರ್ಜುನ  ನಿವೃತ್ತಿ ನಂತರದ ಬದುಕಿನ ಬಗ್ಗೆ  ಕುಟುಂಬ ನಿರ್ವಹಣೆ ಬಗ್ಗೆ ಆತಂಕಗೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ  ಅಡ್ರೆಸ್ ಮಾಡಿ ಡೆತ್ ನೋಟ್ ಬರೆದಿಟ್ಟಿರುವ ಮಲ್ಲಿಕಾರ್ಜನ ದಿನಗೂಲಿ ನೌಕರರನ್ನು ಖಾಯಂಗೊಳಿಸಲು ಮನವಿ ಮಾಡಿಕೊಂಡಿದ್ಧಾರೆ.

ಎರಡು ಪುಟದ ವಿಸ್ತೃತ ಡೆತ್ ನೋಟ್ ನಲ್ಲಿ ತಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆಯಲ್ಲಿ ನೌಕರಿ ಕೊಡಲು ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡು  ತಾನು ಸಾಲವಾಗಿ ಪಡೆದ 20 ಸಾವಿರ ಹಣ ವಾಪಾಸ್ ನೀಡಲು ಕುಟುಂಬಕ್ಕೆ ಮನವಿ ಮಾಡಿದ್ಧಾರೆ.

Please follow and like us:
error