ಡೀಲಿಗಿಳಿದ ಗಂಗಾವತಿ ತಹಶೀಲ್ದಾರ !  ಮರಳು ದಂದೆಕೋರರಿಂದ ಲಂಚಸ್ವೀಕಾರ ವಿಡಿಯೋ ವೈರಲ್

ಗಂಗಾವತಿ :  ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ದಂದೆ ಅವ್ಯಾಹತವಾಗಿ ಮುಂದುವರೆದೇ ಇದೆ. ಇದನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಅಕ್ರಮ ದಂದೆಕೋರರ ಜೊತೆ ಶಾಮೀಲಾಗಿದ್ದಾರೆ ಎನ್ನುವ ಹಲವಾರು ದೂರುಗಳು ಕೇಳಿ ಬರುತ್ತಿದ್ದವು. ಆಗಾಗ ಇದಕ್ಕೆ ಸಾಕ್ಷಿಗಳೂ ಸಹ ಲಭ್ಯವಾಗುತ್ತಿವೆ. ಅದೇ ರೀತಿ ಗಂಗಾವತಿಯ ತಹಶೀಲ್ದಾರ ರೇಣುಕಾ ಅಕ್ರಮ ಮರಳು ದಂದೆಕೋರರಿಂದ ಪ್ರತಿ ಟ್ರಾಕ್ಟರ್ ಗೆ 10 ಸಾವಿರದಂತೆ ಫಿಕ್ಸ್ ಮಾಡಿ ದುಡ್ಡನ್ನು ಸ್ವೀಕರಿಸುವ ವಿಡಿಯೋ ವೈರಲ್ ಆಗಿದೆ. ಕಳೆದ 2-3 ತಿಂಗಳ ಹಿಂದಷ್ಟೇ ಗಂಗಾವತಿಯ ತಹಶೀಲ್ದಾರರಾಗಿ ನೇಮಕವಾಗಿರುವ ರೇಣುಕಾ ಮೇಡಂ ಜೊತೆ ಮರಳು ದಂದೆಕೋರರು ಮಾತನಾಡುತ್ತಾರೆ. ಒಂದು ಟ್ರಾಕ್ಟರ್ ಗೆ 10 ಸಾವಿರ ಕೊಡಬೇಕು ಅಂತಾ ಆ ವಿಡಿಯೋದಲ್ಲಿ ತಹಶೀಲ್ದಾರ ಹೇಳ್ತಾರೆ. ಕೊನೆಗೆ  ಅಡ್ವಾನ್ಸ ಆಗಿ ಆ ವ್ಯಕ್ತಿ 5 ಸಾವಿರ ನೀಡುತ್ತಾರೆ .  ಮೂರ್ನಾಲ್ಕು ದಿನಗಳ ಹಿಂದೆ ಕಚೇರಿಯಲ್ಲೇ ಕುಲ್ಲಂಕುಲ್ಲಾ ಡೀಲ್‌ಗೆ ಇಳಿದ ತಹಶೀಲ್ದಾರ ಮರಳು ಅಕ್ರಮಕ್ಕೆ ಲಂಚ ಪಡೆಯುತ್ತಿರೊ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.

ಎರಡು ಟ್ರಾಕ್ಟರ್ ಗಳಿಗೆ 20 ಸಾವಿರ ಆಗುತ್ತೆ ಇನ್ನೂ 15 ಸಾವಿರ ರೂಪಾಯಿ? ಅಂತ ಕೇಳುವ ದೃಶ್ಯ ವಿಡಿಯೋದಲ್ಲಿದೆ. ಈ ಹಿಂದಿನ ತಹಶೀಲ್ದಾರ ಸಹ  ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲಿಯೇ ರೆಡಹ್ಯಾಂಡಾಗಿ ಸಿಕ್ಕಿಬಿದ್ದು ಸಸ್ಪೇಂಡ್ ಆಗಿದ್ದರು. ಈ ಭ್ರಷ್ಟಾಚಾರದ ಪರಂಪರೆ ಇನ್ನೂ ಮುಂದುವರೆದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕು.

 

Please follow and like us:
error