ಜಿಂಕೆ ಭೇಟೆಗಾರರ ಸೆರೆ : ಗಂಧದ ಕಟ್ಟಿಗೆ,ನಾಡಬಂದೂಕು ವಶಕ್ಕೆ

ಕೊಪ್ಪಳ : ಜಿಲ್ಲೆಯ ಕುಕನೂರಿನ ಮಾಳೆಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಗಂಧದ ಕಟ್ಟಿಗೆ ಹಾಗೂ ನಾಡಬಂದೂಕು ಹೊಂದಿದ್ದ ಮೂವರನ್ನು ಬಂಧಿಸಲಾಗಿದೆ. ಶಿವಪ್ಪ ಹರಿಣಿಶಿಕಾರಿ, ಫಕೀರಪ್ಪ ಹಾಗೂ ಶೇಖಪ್ಪ ಬಂಧಿತರು. ಸಿಪಿಐ ನಾಗಿರೆಡ್ಡಿ ನೇತೃತ್ವದಲ್ಲಿ ಕುಕನೂರು ಠಾಣೆಯ ಪಿಎಸೈ ವೆಂಕಟೇಶ್ ರ ತಂಡ ಮಾಳಿಕೊಪ್ಪ ಗ್ರಾಮದ ಇವರ ಮನೆ ಮೇಲೆ ದಾಳಿ ಮಾಡಿದಾಗ ಮನೆಯಲ್ಲಿ  ಒಂದು ನಾಡಬಂದೂಕು , 9ಕೆಜಿ ಗಂಧದ ಕಟ್ಟಿಗೆ, ಜಿಂಕೆಯ ಚರ್ಮ, ಕೋಡು ಹಾಗೂ ಜಿಂಕೆಯ ಬಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Please follow and like us:
error