ಗ್ರಾ.ಪಂ. ಚುನಾವಣೆ : ಅಬಕಾರಿ ಇಲಾಖೆಯಿಂದ 32 ದಾಳಿ, 49 ಪ್ರಕರಣ ದಾಖಲು

 : ಗ್ರಾಮ ಪಂಚಾಯತ್ ಚುನಾವಣೆ ನಿಮಿತ್ತ ಕೊಪ್ಪಳ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ನವೆಂಬರ್. 30 ರಿಂದ ಇಲ್ಲಿಯವರೆಗೆ 32 ದಾಳಿಯನ್ನು ನಡೆಸಿ ಒಟ್ಟು 49 ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿವರ;
ಕೊಪ್ಪಳ ತಾಲೂಕಿನಲ್ಲಿ ಘೋರ-1, ಬಿಎಲ್‌ಸಿ-5, 15(ಎ)-11 ಸೇರಿ ಒಟ್ಟು 17 ಪ್ರಕರಣಗಳನ್ನು ದಾಖಲಿಸಲಾಗಿದೆ. ಗಂಗಾವತಿ ತಾಲೂಕಿನಲ್ಲಿ ಘೋರ-6, ಬಿಎಲ್‌ಸಿ-3, 15(ಎ)-11 ಒಟ್ಟು 20 ಪ್ರಕರಣಗಳು. ಕುಷ್ಟಗಿ ತಾಲೂಕಿನ ಘೋರ-3, ಬಿಎಲ್‌ಸಿ-4, 15(ಎ)-5 ಸೇರಿ ಒಟ್ಟು 12 ಪ್ರಕರಣಗಳು. ಜಿಲ್ಲೆಯಲ್ಲಿ ಒಟ್ಟು ಘೋರ-10, ಬಿಎಲ್‌ಸಿ-12, 15(ಎ)-27 ಸೇರಿ ಒಟ್ಟು 49 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3 ಜನ ಆರೋಪಿತರನ್ನು ಬಂದಿಸಿ 4 ದ್ವಿಚಕ್ರ ವಾಹನಗಳು, 89.700 ಲೀಟರ್ ಮದ್ಯ, 49.510 ಲೀ. ಬಿಯರ್ ಹಾಗೂ ಕಳ್ಳಭಟ್ಟಿಯಲ್ಲಿ 2 ಲೀಟರ್ ಸರಾಯಿಯನ್ನು ಜಪ್ತಿ ಮಾಡಲಾಗಿದೆ ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು   ತಿಳಿಸಿದ್ದಾರೆ.
Please follow and like us:
error