ಆರೋಪಿಗೆ ಸಿಸಿಟಿವಿ ಫೂಟೇಜ್ ನೀಡದಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆ

ರಾಜ್ಯ ಮಾಹಿತಿ ಆಯೋಗ ಆದೇಶ

ಆರೋಪಿಗೆ ಸಿಸಿಟಿವಿ ಫೂಟೇಜ್ ನೀಡದಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ

ಬೆಂಗಳೂರು, : ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನಾಗಿ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುವ ಫುಟೇಜ್‍ಗಳನ್ನು ನಿರ್ದೋಷಿಯಾಗಿ ಸಾಬೀತುಪಡಿಸಿಕೊಳ್ಳಲು ಆರೋಪಿಗೆ ನೀಡದಿದ್ದರೆ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ರಾಜ್ಯ ಮಾಹಿತಿ ಆಯೋಗ ಮಹತ್ವದ ಆದೇಶ ಹೊರಡಿಸಿದೆ.

ಕಡ್ಡಾಯವಾಗಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಅವುಗಳಲ್ಲಿ ದಾಖಲಾದ ಫೂಟೇಜ್‍ಗಳನ್ನು ಕಡ್ಡಾಯವಾಗಿ ಕನಿಷ್ಠ 6 ತಿಂಗಳುಗಳವರೆಗೆ ಸಂರಕ್ಷಿಸಬೇಕು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಸುಸ್ಥಿತಿಯಲ್ಲಿಡಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವನ್ನು ಆದೇಶದಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಎಸ್.ಎಲ್.ಪಾಟೀಲ್ ಅವರು ಉಲ್ಲೇಖಿಸಿದ್ದಾರೆ.

ಪೊಲೀಸ್ ಠಾಣೆಗಳಲ್ಲಿ ಪದೇ ಪದೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಹಾಗೂ ಪದೇ ಪದೇ ತಪ್ಪಾಗಿ ಯಾಂತ್ರಿಕವಾಗಿ ವಿನಾಯಿತಿ ತೆಗೆದುಕೊಳ್ಳುತ್ತಿರುವ ವಿಷಯವನ್ನು ಪೊಲೀಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರ ಗಮನಕ್ಕೆ ತರಲಾಗುತ್ತಿದೆ.  ಉಚ್ಛ ನ್ಯಾಯಾಲಯಗಳು ಹೊರಡಿಸಿರುವ ತೀರ್ಪುಗಳನ್ನು ಹಾಗೂ ಮಾಹಿತಿ ಹಕ್ಕುಗಳ ಕಾಯಿದೆಯ ಅನುಷ್ಠಾನದಲ್ಲಿ ಸಂಸತ್ತಿನ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಪೊಲೀಸ್ ಠಾಣೆಗಳಿಗೆ ಸೂಕ್ತ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಬೇಕೆಂದು ಆಯೋಗವು ಪೊಲೀಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು ಅವರಿಗೆ ಸಲಹೆ ನೀಡಿದೆ.

Please follow and like us:
error