ಅಟೋಗಳ ಗಾಲಿಗಳನ್ನು ಕದ್ದೊಯ್ದ ಕಳ್ಳರು

ಕೊಪ್ಪಳ : ತಡರಾತ್ರಿ ನಗರದಲ್ಲಿ ಆಟೋಗಳ ಗಾಲಿಗಳನ್ನು ಕಳ್ಳತನ ಮಾಡಲಾಗಿದೆ. ಕಪಾಲಿಗಲ್ಲಿ.ಕುರುಬರ ಓಣಿ.ಪಲ್ಲೇದರ ಓಣಿ ನಂದೀನಗರಗಳಲ್ಲಿ ಸುಮಾರು 8 ಗಾಲಿಗಳನ್ನು ಕಳುವು ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಈ ರೀತಿಯ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇವೆ.  ಒಂದು ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಅಟೋಗಳ ಗಾಲಿಗಳನ್ನು ಕದ್ದೊಯ್ಯಲಾಗಿದೆ. ಈ ಕುರಿತು ಪೋಲಿಸರಿಗೂ ಮಾಹಿತಿ ನೀಡಲಾಗಿದ್ದರೂ ಸಹ ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಅಟೋ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:
error