ಗರ್ಭಕೋಶದ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಕೊಪ್ಪಳ ಕಿಮ್ಸ್ ವೈದ್ಯರ ಸಾಧನೆ

 ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೊಪ್ಪಳ ನಗರದ ೬೦ ವರ್ಷದ   ಮಹಿಳೆಯೋರ್ವಳಿಗೆ ಕೊಪ್ಪಳ ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರುಗಳ ತಂಡವು ಜಟಿಲವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ, ಬಡ ಕುಟುಂಬಕ್ಕೆ ಆಶಾಕಿರಣವಾಗಿದೆ.  ಕಿಮ್ಸ್ ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ ಆರಂಭಿಸಿದಾಗಿನಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆ ಯನ್ನು ಬೋಧಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.  ವಿವಿಧ ವಿಭಾಗಗಳಲ್ಲಿ ತಜ್ಞ ವೈದ್ಯರುಗಳು ಸೇವೆ ಸಲ್ಲಿಸುತ್ತಿದ್ದು, ಹೊರರೋಗಿಗಳ ಸಂಖ್ಯೆ ಹಾಗೂ ಒಳರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ದುರ್ಲಭ ಶಸ್ತ್ರ ಕ್ರಿಯೆಗಳನ್ನು ಇಲ್ಲಿ ಯಶಸ್ವಿಯಾಗಿ ನೆರವೇರಿಸುತ್ತಿದೆ.ಇತ್ತೀಚೆಗೆ ಕೊಪ್ಪಳ ನಗರದ ೬೦ ವರ್ಷದ ವಯೋವೃದ್ದ ಮಹಿಳೆ ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹಲವಾರು ವೈದ್ಯರನ್ನು ಕಂಡು ಹಣ ಹೊಂದಿಸಲಾಗದೆ ಅಸಹಾಯಕರಾಗಿದ್ದರು.  ಇವರಿಗೆ ಆಶಾಕಿರಣವಾಗಿ ಗೋಚರಿಸಿದ್ದು ಕೊಪ್ಪಳ ಜಿಲ್ಲಾ ಆಸ್ಪತ್ರೆ ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ. ಶಂಕರ ಮಲಪುರೆ.   ಗರ್ಭಕೋಶ ಕ್ಯಾನ್ಸ್‌ರ್‌ನಿಂದ ಮಹಿಳೆಯ ಸಂಪೂರ್ಣ ಪರೀಕ್ಷೆಯ ನಂತರ,…

Read More